ಹಣ ಪಾವತಿಸಿ ಇಲ್ಲವೇ ಜೈಲು ಶಿಕ್ಷೆಯನ್ನು ಎದುರಿಸಿ : ಅನಿಲ್ ಅಂಬಾನಿಗೆ ಸುಪ್ರೀಂ ಕೋರ್ಟ್ ಆದೇಶ – Vishwanews24
ಹೊಸದಿಲ್ಲಿ : ಟೆಲಿಕಾಂ ಉಪಕರಣ ಉತ್ಪಾದನಾ ಸಂಸ್ಥೆ ಎರಿಕ್ಸನ್ ಗೆ 550 ಕೋಟಿ ರೂ. ಬಾಕಿ ಪಾವತಿಸದಿರುವ ಮೂಲಕ ಆರ್ ಕಾಮ್ ಅಧ್ಯಕ್ಷ ಅನಿಲ್ ಅಂಬಾನಿ ಅವರು ಉದ್ದೇಶಪೂರ್ವಕ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಮಾಡಿ ಕೋರ್ಟ್ ನಿಂದನೆ ಎಸಗಿದ್ದಾರೆ; ಆದುದರಿಂದ ಅವರು ಕೋರ್ಟ್ ನಿಂದನೆಯ ಕಾನೂನು ಕ್ರಮದಿಂದ ಪಾರಾಗಲು ನಾಲ್ಕು ವಾರಗಳ ಒಳಗೆ 453 ಕೋಟಿ ರೂ. ಪಾವತಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಇಂದು ಹೇಳಿತು.
ನಾಲ್ಕು ವಾರಗಳ ಒಳಗೆ 453 ಕೋಟಿ ರೂ. ಪಾವತಿಸದಿದ್ದರೆ ಆರೋಪಿಗಳು ಮೂರು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾದೀತು ಎಂದು ಜಸ್ಟಿಸ್ ಆರ್ ಎಫ್ ನಾರೀಮನ್ ಮತ್ತು ವಿನೀತ್ ಶರಣ್ ಅವರನ್ನು ಒಳಗೊಂಡ ಪೀಠ ಎಚ್ಚರಿಕೆ ನೀಡಿತು.
ಹಾಗೆಯೇ ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ತಲಾ 1 ಕೋಟಿ ರೂ.ಗಳನ್ನು ನಾಲ್ಕು ವಾರಗಳ ಒಳಗೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ಪಾವತಿಸಬೇಕು; ಇಲ್ಲದಿದ್ದರೆ ಅಧ್ಯಕ್ಷ ಅನಿಲ್ ಅಂಬಾನಿ ಅವರು ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುವುದು ಎಂದು ಕೋರ್ಟ್ ಹೇಳಿತು.
ರಿಲಯನ್ಸ್ ಗ್ರೂಪ್ ಈಗಾಗಲೇ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಿರುವ 118 ಕೋಟಿ ರೂ.ಗಳನ್ನು ಎರಿಕ್ಸನ್ ಕಂಪೆನಿಗೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿ
ತು. 
