ಹರ್ಷ ಕೊಲೆ ಪ್ರಕರಣ- ಕಾಪುವಿನಲ್ಲಿ ಭಜರಂಗದಳ ಪ್ರತಿಭಟನೆ: vishwanews24

Featured, ಉಡುಪಿ

ಹರ್ಷ ಕೊಲೆ ಪ್ರಕರಣ- ಕಾಪುವಿನಲ್ಲಿ ಭಜರಂಗದಳ ಪ್ರತಿಭಟನೆ: vishwanews24
ಕಾಪು: ಶಿವಮೊಗ್ಗ ಹಿಂದುಸಂಘಟನೆ ಕಾರ್ಯಕರ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪುವಿನಲ್ಲಿ ತಾಲೂಕು ಕಚೇರಿ ಮುಂಭಾಗ ಭಜರಂಗದಳದಿಂದ ಮೌನಪ್ರಾರ್ಥನೆ ಹಾಗೂ ಪ್ರತಿಭಟನಾ ಸಭೆ ಕಾಪು ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಕಾಪು ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ” ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಕೊಲೆಗಳಿಂದ ಸಮಾಜ ವಿಚಲಿತವಾಗಿದೆ ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ಕ್ರಮ ವಹಿಸಬೇಕು ಹಾಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಈ‌ ಸಂಧರ್ಭದಲ್ಲಿ ಸುಧಿರ್ ಪೂಜಾರಿ ಕಲ್ಲುಗುಡ್ಡೆ,ಜಯಪ್ರಕಾಶ್ ಪ್ರಭು,ರಾಜೇಶ್ ಕೊಟ್ಯಾನ್,ರಾಜೇಂದ್ರ ಶೆಣೈ ಮೊದಲಾದವರು ಇದ್ದರು.

Leave a Reply