ಹರ್ಷ ಹತ್ಯೆ ಪ್ರಕರಣ : ಹತ್ತನೇ ಆರೋಪಿ ಜಾಫ‌ರ್‌ ಸಾದಿಕ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು  – Vishwanews24

Featured, ರಾಜ್ಯ ನ್ಯೂಸ್

ಹರ್ಷ ಹತ್ಯೆ ಪ್ರಕರಣ : ಹತ್ತನೇ ಆರೋಪಿ ಜಾಫ‌ರ್‌ ಸಾದಿಕ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು 

ಶಿವಮೊಗ್ಗ: ಶಿವಮೊಗ್ಗದಲ್ಲಿನ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಹತ್ತನೇ ಆರೋಪಿ ಜಾಫ‌ರ್‌ ಸಾದಿಕ್‌(52) ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಹತ್ತನೇ ಆರೋಪಿಯು ಆರನೇ ಆರೋಪಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಹಕಾರ ನೀಡಿದ್ದಾನೆ ಎಂಬ ಆರೋಪ ಈತನ ಮೇಲಿದೆ.

ಮಂಗಳೂರು: ಶಾಸಕ ಹರೀಶ್ ಪೂಂಜಾ ಕಾರಿಗೆ ಅಡ್ಡಗಟ್ಟಿ ದುಷ್ಕರ್ಮಿಗಳಿಂದ ತಲವಾರು ದಾಳಿ ಯತ್ನ ; ದೂರು ದಾಖಲು – Vishwanews24

ಈತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಆದರೆ ಆರೋಪಿಯು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪುತ್ರ ಜಿಲಾನ್‌ ಮತ್ತು ಇತರರನ್ನು ತನ್ನ ಕಾರಿನಲ್ಲಿಯೇ ಬೆಂಗಳೂರಿಗೆ ಕರೆತಂದು ಬಿಟ್ಟು ಹೋಗಿದ್ದ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು ಎಂದು ಎನ್‌ಐಎ ತಿಳಿಸಿದೆ.

Leave a Reply