ಹಲವಾರು ವರ್ಷಗಳ ನಂತರ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ ;ಶಿಲಾನ್ಯಾಸ ನೆರವೇರಿದ ಪ್ರಧಾನಿ ಮೋದಿ -Vishwanews24

Featured, ರಾಷ್ಟ್ರ ನ್ಯೂಸ್

ಅಯೋಧ್ಯೆ : ಹಲವಾರು ವರ್ಷಗಳ ನಂತರ ಇಂದು ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಮಾಡಲು ಶಿಲಾನ್ಯಸ ನೆರವೇರಿಸಿದ್ದಾರೆ. ಅನೇಕ ಸಾಧು-ಸಂತರು, ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು.

ಎಲ್ಲಾ ರೀತಿಯ ಪೂಜಾ ಸಂಕಲ್ಪಗಳನ್ನು ಮಾಡಿದ ಪ್ರಧಾನಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. 12:30 ಭೂಮಿ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. 12:40ಕ್ಕೆ ಮೋದಿ ಅಡಿಗಲ್ಲು ಹಾಕಿದರು. ಆ ಮೂಲಕ ರಾಮ ಮಂದಿರ ನಿರ್ಮಾಣದ ಅದ್ಭುತ ಕ್ಷಣಕ್ಕೆ ಅಯೋಧ್ಯೆ ಸಾಕ್ಷಿಯಾಯಿತು.