Featured

ಹಳಿ ತಪ್ಪಿದ ಕೋಲ್ಕತ್ತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು; ಹಲವು ಪ್ರಯಾಣಿಕರಿಗೆ ಗಾಯ – vishwanews24

ಹಳಿ ತಪ್ಪಿದ ಕೋಲ್ಕತ್ತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು; ಹಲವು ಪ್ರಯಾಣಿಕರಿಗೆ ಗಾಯ

ಗುವಾಹಟಿ: ಕೋಲ್ಕತ್ತಾದಿಂದ ಮಿಜೋರಾಂಗೆ ತೆರಳುತ್ತಿದ್ದ ಪ್ರಯಾಣಿಕ ರೈಲಿನ ಐದು ಬೋಗಿಗಳು ಇಂದು ಅಸ್ಸಾಂನಲ್ಲಿ ಹಳಿ ತಪ್ಪಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೆಲವೇ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಅಸ್ಸಾಂನ ಡಿಗಾರು ರೈಲು ನಿಲ್ದಾಣದ ಬಳಿ, ಬೆಳಗ್ಗೆ 6:54ಕ್ಕೆ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್‌ ರೈಲಿಗೆ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:

ಒಂದು ರೈಲಿಗೆ ದಾರಿ ಮಾಡಿಕೊಡಲು ಈ ರೈಲು ಪ್ರಯತ್ನಿಸಿದಾಗ, ಅದರ ಚಾಲಕನಿಗೆ (ಲೋಕೋ ಪೈಲಟ್) ವೇಗವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ರೈಲು ಹಳಿ ತಪ್ಪುವ ದುರದೃಷ್ಟಕರ ಘಟನೆ ಸಂಭವಿಸಿದ್ದು, ಇದರಲ್ಲಿ ಎಂಜಿನ್ (ಲೋಕೋಮೋಟಿವ್) ಮತ್ತು ಐದು ಬೋಗಿಗಳು ಹಳಿ ತಪ್ಪಿದವು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರಿಗಾಗಿ ಪರ್ಯಾಯ ರೈಲಿನ ವ್ಯವಸ್ಥೆ ಮಾಡಲಾಯಿತು ಎಂದು ರೈಲ್ವೆ ಇಲಾಖೆ ತಿಳಿಸಿದೆ. ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಆರಂಭಗೊಂಡಿದ್ದು, ರೈಲ್ವೆ ಅಧಿಕಾರಿಗಳು ಅಪಘಾತ ಸ್ಥಳವನ್ನು ತಲುಪಿದ್ದಾರೆ.

ಇದನ್ನೂ ಓದಿ: 

ರೈಲು ಅವಘಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿರುವ ದೃಶ್ಯ ಕಂಡುಬಂತು.

Vishwa News 24

Recent Posts

ಯಾರೂ ಗಾಬರಿ ಪಡಬೇಕಿಲ್ಲ, ರೈತರ ಖಾತೆಗೆ ಹಣ ಹಾಕ್ತೀವಿ: ಸಿಎಂ ಸ್ಪಷ್ಟನೆ – vishwanews24

ಯಾರೂ ಗಾಬರಿ ಪಡಬೇಕಿಲ್ಲ, ರೈತರ ಖಾತೆಗೆ ಹಣ ಹಾಕ್ತೀವಿ: ಸಿಎಂ ಸ್ಪಷ್ಟನೆ ಬೆಂಗಳೂರು: ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ಕಡಿಮೆ…

8 minutes ago

ನ.13ರಂದು ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ – vishwanews24

ನ.13ರಂದು ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ  ಉಡುಪಿ: ರಾಜ್ಯದ ರಾಜಧಾನಿ ಬೆಂಗಳೂರನ್ನು ಮಂಗಳೂರು, ಉಡುಪಿ,…

14 minutes ago

ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್‌ : ನ.30 ರವರೆಗೆ ಇ-ಕೆವೈಸಿ ಗಡುವು ವಿಸ್ತರಣೆ – vishwanews24

ಪಡಿತರ ಚೀಟಿದಾರರಿಗೆ ಗುಡ್‌ನ್ಯೂಸ್‌ : ನ.30 ರವರೆಗೆ ಇ-ಕೆವೈಸಿ ಗಡುವು ವಿಸ್ತರಣೆ ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್‌…

32 minutes ago

ಸುರತ್ಕಲ್: ಮುಕ್ಕ ಆಸ್ಪತ್ರೆಯ ಕ್ಯಾಂಟೀನ್, ಹಾಸ್ಟೆಲ್ ಅಡುಗೆ ಕೋಣೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ ; ಪರಿಶೀಲನೆ – vishwanews24

ಸುರತ್ಕಲ್: ಮುಕ್ಕ ಆಸ್ಪತ್ರೆಯ ಕ್ಯಾಂಟೀನ್, ಹಾಸ್ಟೆಲ್ ಅಡುಗೆ ಕೋಣೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ ; ಪರಿಶೀಲನೆ ಸುರತ್ಕಲ್: ಆರೋಗ್ಯ…

1 day ago

ಉಡುಪಿ : ನೇರ ಸಂದರ್ಶನ – vishwanews24

ಉಡುಪಿ : ನೇರ ಸಂದರ್ಶನ      ಉಡುಪಿ: ನಗರದ ಕಲ್ಸಂಕ ಅಂಬಾಗಿಲು ರಸ್ತೆಯ ಗುಂಡಿಬೈಲಿನಲ್ಲಿರುವ ಸಾನ್ವಿ ಟ್ರೇರ‍್ಸ್ನಲ್ಲಿ ನವೆಂಬರ್ 13 ರಂದು…

1 day ago

ಬಂಟ್ವಾಳ: ಕೆಟ್ಟು ನಿಂತಿದ್ದ ಲಾರಿಯಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಪತ್ತೆ ; ಲಾರಿ ವಶಕ್ಕೆ – vishwanews24

ಬಂಟ್ವಾಳ : ರಸ್ತೆಯಲ್ಲೇ ಕೆಟ್ಟು ನಿಂತಿದ್ದ ಲಾರಿಯಲ್ಲಿ ಪರಿಶೀಲನೆ ವೇಳೆ ಅಕ್ರಮ ಮಣ್ಣು ಸಾಗಾಟ ಪತ್ತೆ ; ಲಾರಿ ವಶಕ್ಕೆ…

2 days ago