ಹಾಸನ: ಮಿಕ್ಸಿ ಸ್ಫೋಟ ಪ್ರಕರಣ – ಪ್ರಮುಖ ಆರೋಪಿ ಬಂಧನ , ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆಗೆ ನಿರ್ಧಾರ – Vishwanews24

Featured, ರಾಜ್ಯ ನ್ಯೂಸ್

ಹಾಸನ: ಮಿಕ್ಸಿ ಸ್ಫೋಟ ಪ್ರಕರಣ – ಪ್ರಮುಖ ಆರೋಪಿ ಬಂಧನ , ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆಗೆ ನಿರ್ಧಾರ

ಹಾಸನ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಅನೂಪ್ ಕುಮಾರ್  ನನ್ನು ಬಂಧಿಸಲಾಗಿದೆ. ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದೇವೆ. ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದರು.

ಮಿಕ್ಸಿಯಲ್ಲಿ ಡೆಟೊನೆಟರ್ ಇಟ್ಟು ಬ್ಲಾಸ್ಟ್ ಮಾಡುವುದು ಹೇಗೆ ಎಂದು ಇಂಟರ್‍ನೆಟ್ ಸರ್ಚ್ ಮಾಡಿದ್ದಾನೆ. ರಾಮನಗರ  ದಲ್ಲಿ ನಡೆಯುತ್ತಿರುವ ಕ್ವಾರಿಯಲ್ಲಿ ಎರಡು ಡೆಟೊನೆಟರ್ ತಂದಿದ್ದಾನೆ. ಡೆಟೊನೆಟರ್ ಕದ್ದಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಸುಳ್ಯ :  ಶ್ರೀ ಚೆನ್ನಕೇಶವ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಮುಕ್ತ ಅವಕಾಶ: ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ – Vishwanews24

ಡಿ.16 ರಂದು ಪಾರ್ಸೆಲ್ ಕಳುಹಿಸಿದ್ದು, ಡಿ.26 ರಂದು ಮಿಕ್ಸಿ ಬ್ಲಾಸ್ಟ್ ಆಗಿತ್ತು. ಮಿಕ್ಸಿ ಬ್ಲಾಸ್ಟ್ ಆಗಿರುವ ನ್ಯೂಸ್ ಬಂದಿದೆಯಾ ಎಂದು ಡಿ.17 ರಿಂದಲೇ ಗೂಗಲ್‍ನಲ್ಲಿ ಸರ್ಚ್ ಮಾಡಿದ್ದಾನೆ. ಕೊರಿಯರ್ ಟ್ರ್ಯಾಕಿಂಗ್ ಐಡಿ ಡೆಲಿವರಿ ಆಗಿದೆಯಾ, ಬಾಂಬ್ ತಯಾರಿಕೆ ಬಗ್ಗೆಯೂ ಸರ್ಚ್ ಮಾಡಿದ್ದಾನೆ. ಡೆಟೊನೆಟರ್ ಬ್ಲಾಸ್ಟ್ ಮಾಡುವ ವೈರ್‍ನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಲಘಟ್ಟಪುರದಲ್ಲಿರುವ ಆತನ ಮನೆಯಲ್ಲಿ ಮಿಕ್ಸಿಯ ಮೂರನೇ ಜಾರ್ ಸಿಕ್ಕಿದೆ. ನನ್ನ ಪ್ರೀತಿ ನಿರಾಕರಿಸಿದ್ದಕ್ಕೆ, ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತನಿಖೆ ವೇಳೆ ಅನೂಪ್ ಕುಮಾರ್ ಬ್ಲಾಸ್ಟ್ ಸ್ಕೆಚ್ ಕಹಾನಿ ಬಯಲಾಗಿದೆ.

ಸುಳ್ಯ :  ಶ್ರೀ ಚೆನ್ನಕೇಶವ ಜಾತ್ರೋತ್ಸವದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಮುಕ್ತ ಅವಕಾಶ: ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ – Vishwanews24

Leave a Reply