ಹಿಂದಿ ಕಿರುತೆರೆ ನಟ ನಿತಿನ್ ಚೌಹಾಣ್ ಆತ್ಮಹತ್ಯೆ – vishwanews24

Featured, ರಾಷ್ಟ್ರ ನ್ಯೂಸ್

ಹಿಂದಿ ಕಿರುತೆರೆ ನಟ ಕ್ರೈಂ ಪೆಟ್ರೋಲ್ ಖ್ಯಾತಿಯ ನಿತಿನ್ ಚೌಹಾಣ್ ಆತ್ಮಹತ್ಯೆ 

ಮುಂಬೈ: ‘ಕ್ರೈಂ ಪ್ಯಾಟ್ರೋಲ್’ ಖ್ಯಾತಿಯ ಕಿರುತೆರೆ ನಟ ನಿತಿನ್ ಚೌಹಾಣ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಅವರಿಗೆ 35 ವರ್ಷ ವಯಸ್ಸಾಗಿತ್ತು.

ಗುರುವಾರ ರಾತ್ರಿ ಮುಂಬೈನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಿತಿನ್ ಅವರ ಮೃತದೇಹ ಪತ್ತೆಯಾಗಿದೆ. ನಿತಿನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಿತಿನ್ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತರು, ಕುಟುಂಬದವರು ಖಚಿತಪಡಿಸಿದ್ದಾರೆ ಎಂದು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ಉತ್ತರ ಪ್ರದೇಶ ಆಲಿಘಡ ಮೂಲದ ನಿತಿನ್, ಹಿಂದಿಯ ದಾದಾಗಿರಿ-2 ರಿಯಾಲಿಟಿ ಶೋ ವಿಜೇತರಾಗಿದ್ದರು. ಇದಲ್ಲದೇ ಅನೇಕ ರಿಯಾಲಿಟಿ ಶೋ, ಹಿಂದಿ ಧಾರಾವಾಹಿಗಳ ಮೂಲಕ ಅವರು ಕಿರುತೆರೆಯಲ್ಲಿ ಮಿಂಚಿದ್ದ

ನಾನು ಬಿಸಿನೆಸ್ ವಿರೋಧಿಯಲ್ಲ; ಏಕಸ್ವಾಮ್ಯದ ವಿರೋಧಿ : ರಾಹುಲ್ ಗಾಂಧಿ ಸ್ಪಷ್ಟನೆ – vishwanews24

Leave a Reply