ಹಿಂದೂಗಳು ರಾಮಮಂದಿರ, ಮುಸ್ಲಿಂರು ಮಸೀದಿ ಕಟ್ಟುವುದರಲ್ಲಿ ಸಂತಸದಿಂದ ಮುಂದಾಗುತ್ತಿರುವುದು ಕಂಡು ನನಗೆ ಖುಷಿ ಆಗುತ್ತಿದೆ; ನಿಜವಾದ ಸಂತೋಷ ಒಗ್ಗಟ್ಟಿನಲ್ಲಿದೆ : ರಮ್ಯಾ-Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಹಿಂದೂಗಳು ರಾಮಮಂದಿರ ಕಟ್ಟುವುದರಲ್ಲಿ, ಮುಸ್ಲಿಂರು ಮಸೀದಿ ಕಟ್ಟುವುದರಲ್ಲಿ ಸಂತಸದಿಂದ ಮುಂದಾಗುತ್ತಿರುವುದು ಕಂಡು ನನಗೆ ಖುಷಿ ಆಗುತ್ತಿದೆ. ಆದ್ರೆ, ನಿಜವಾದ ಸಂತೋಷ ಒಗ್ಗಟ್ಟಿನಲ್ಲಿದೆ ಎಂದು ಕಾಂಗ್ರೆಸ್‌ ಮಾಜಿ ಸಂಸದೆ, ನಟಿ ರಮ್ಯಾ ಹೇಳಿದ್ದಾರೆ.

ರಾಮಮಂದಿರ ವಿಚಾರವಾಗಿ ಮೊದಲ ಬಾರಿಗೆ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ರಮ್ಯಾ, ಹಿಂದೂಗಳು ಸಂತೋಷದಿಂದ ರಾಮ ಮಂದಿರ ನಿರ್ಮಾಣ ಮಾಡಲು ಮುಂದಾಗುತ್ತಿರುವುದನ್ನು ಕಂಡು ನನಗೆ ಸಂತಸವಿದೆ. ಮುಸ್ಲಿಮರು ಸಂತೋಷದಿಂದ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವುದನ್ನು ನೋಡಿ ನನಗೆ ಸಂತಸವಿದೆ. ಆದರೆ ಇಬ್ಬರೂ ಸಂತೋಷವಾಗಿರಲು ಅಥವಾ ದೇವರನ್ನು ಅರಿತುಕೊಳ್ಳಲು ದೇವಾಲಯ ಅಥವಾ ಮಸೀದಿ ಅಗತ್ಯವಿಲ್ಲ ಎಂದು ಅವರಿಗೆ ತಿಳಿದಾಗ ನನಗೆ ಹೆಚ್ಚು ಸಂತೋಷವಾಗುತ್ತದೆ. ನಿಜವಾದ ಸಂತೋಷ ಒಗ್ಗಟ್ಟಿನಲ್ಲಿದೆ. ಹೊರಗಡೆ ದೇವರಿಲ್ಲ. ದೇವರು ನಮ್ಮ ಒಳಗಡೆಯೇ ಇದ್ದಾನೆ ಎಂದು ಬರೆದುಕೊಂಡಿದ್ದಾರೆ. ಇನ್ನು ರಾಜಕೀಯಕ್ಕೆ ಬಲಿಯಾಗಬೇಡಿ. ರಾಜಕೀಯ ಶಕ್ತಿ ಮತ್ತು ನಿಯಂತ್ರಣಕ್ಕಾಗಿ ಸೃಷ್ಟಿಸುವ ಬಿಕ್ಕಟ್ಟಿಗೆ ಬಲಿಯಾಗಬೇಡಿ. ಪ್ರಶ್ನಿಸುವ ಮೂಲಕ ಉತ್ತುಂಗಕ್ಕೆ ಏರಿ ಎಂದು ಹೇಳಿದ್ದಾರೆ.