Featured

ಹಿಂದೂ ಸಂಪ್ರದಾಯದಂತೆ ತಮಿಳುನಾಡಿನ ಬ್ರಾಹ್ಮಣ ಯುವತಿಯ ಜೊತೆ ಸಪ್ತಪದಿ ತುಳಿದ ಬಾಂಗ್ಲಾ ಮಹಿಳೆ

ಹಿಂದೂ ಸಂಪ್ರದಾಯದಂತೆ ತಮಿಳುನಾಡಿನ ಬ್ರಾಹ್ಮಣ ಯುವತಿಯ ಜೊತೆ ಸಪ್ತಪದಿ ತುಳಿದ ಬಾಂಗ್ಲಾ ಮಹಿಳೆ

ಒಟ್ಟಾವಾ: ತಮಿಳುನಾಡಿನ ಬ್ರಾಹ್ಮಣ ಕುಟುಂಬದ ಯುವತಿ ಬಾಂಗ್ಲಾದೇಶದ ಮಹಿಳೆಯೊಂದಿಗೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿರುವ ತಮಿಳುನಾಡಿನ ಯುವತಿ ಸುಭೀಕ್ಷಾ ಸುಬ್ರಮಣಿ (29) ಹಾಗೂ ಬಾಂಗ್ಲಾದೇಶದ ಮಹಿಳೆ ಟೀನಾ (35) ಇಬ್ಬರೂ ಕಳೆದ 6 ವರ್ಷಗಳ ಹಿಂದೆ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದಾರೆ. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಇದಕ್ಕೆ ಎರಡೂ ಕುಟುಂಬಸ್ಥರೂ ಪೂರ್ಣ ಸಹಕಾರ ನೀಡಿದ್ದರಿಂದಾಗಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಭೀಕ್ಷಾ, ನಮ್ಮ ಪೋಷಕರು ಸಂಪ್ರದಾಯವಾದಿಗಳು, ಹಿಂದೂ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ನೀಡುತ್ತಾರೆಯೇ ಎಂಬ ಆತಂಕದಲ್ಲಿದ್ದೆ. ಆದರೆ ಅವರು ಯಾವುದೇ ವಿರೋಧವಿಲ್ಲದೇ ನಮ್ಮ ಬೆಂಬಲಕ್ಕೆ ನಿಂತರು. ಬ್ರಾಹ್ಮಣ ವಿವಾಹ ಕ್ರಮದಂತೆ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಟೀನಾ ಸಹ ಇದರಿಂದ ಹರ್ಷಗೊಂಡಿದ್ದು, ನನಗೆ 19 ವರ್ಷ ಇದ್ದಾಗಲೇ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೆ ನನಗೆ ಸಲಿಂಗಿಗಳ ಕಡೆಗೆ ಒಲವಿತ್ತು. ತಾನು ಸುಭೀಕ್ಷಾಳನ್ನು ಮದುವೆಯಾಗಬೇಕು ಅಂದುಕೊಂಡಾಗ ಆಕೆಯ ಸಹೋದರಿ ವಿರೋಧಿಸಿದ್ದರು. ಆದರೆ ಸುಭೀಕ್ಷಾಳ 84 ವರ್ಷದ ಅಜ್ಜಿ ಮದುವೆಗೆ ಒಪ್ಪಿದ ನಂತರ ಎಲ್ಲರೂ ಒಪ್ಪಿಕೊಂಡು ಮದುವೆ ನೆರವೇರಿಸಿಕೊಟ್ಟರು.

ತಮಿಳುನಾಡಿನ ಮೂಲದ ಸುಭೀಕ್ಷಾ ಕೆನಡಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕೆಲಸ ಮಾಡುತ್ತಿದ್ದಾರೆ. ಬಾಂಗ್ಲಾದೇಶ ಮೂಲದ ಟೀನಾ 2003ರಲ್ಲಿ ಕೆನಡಾಕ್ಕೆ ಬಂದು ನೆಲೆಸಿದ್ದು, ಕ್ಯಾಲ್ಗರಿಯ ಫೂತ್‌ಹಿಲ್ಸ್ ಆಸ್ಪತ್ರೆಯ ಪೇಷೆಂಟ್ ಕೇರ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.

ಮಣಿಪಾಲ :ಮಣ್ಣಪಳ್ಳವನ್ನು ಪ್ರವಾಸೀ ತಾಣವಾಗಿ ಅಭಿವೃಧ್ದಿಪಡಿಸುವ ನಿಟ್ಟಿನಲ್ಲಿ ಕ್ರಾಪ್ಟ್ ವಿಲೇಜ್ ಮಾಡಲು ರೂಪುರೇಷೆ ಸಿದ್ದಪಡಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. – Vishwanews24

Vishwa News 24

Recent Posts

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

39 seconds ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

9 minutes ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

16 minutes ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

23 minutes ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

20 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

21 hours ago