ಹಿಜಬ್ ವಿಚಾರ ಸಣ್ಣ ವಿಚಾರ ಅಲ್ಲ ಅದು ದೇಶವನ್ನು ಎರಡನೇ ಭಾರೀ ವಿಭಜನೆ ಮಾಡಲು ಉಂಟಾಗಿರುವ ಬೀಜಾಂಕುರ : ಕಲ್ಲಡ್ಕ  ಪ್ರಭಾಕರ್ ಭಟ್ – Vishwanews24

Featured, ದಕ್ಷಿಣ ಕನ್ನಡ

ಹಿಜಬ್ ವಿಚಾರ ಸಣ್ಣ ವಿಚಾರ ಅಲ್ಲ ಅದು ದೇಶವನ್ನು ಎರಡನೇ ಭಾರೀ ವಿಭಜನೆ ಮಾಡಲು ಉಂಟಾಗಿರುವ ಬೀಜಾಂಕುರ : ಕಲ್ಲಡ್ಕ  ಪ್ರಭಾಕರ್ ಭಟ್

ಹಿಜಾಬ್ ವಿವಾದವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫಲ..

ಮಂಗಳೂರು : ಹಿಜಾಬ್ ವಿವಾದವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ  ಪ್ರಭಾಕರ್ ಭಟ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಪುನ: ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಜಬ್ ವಿಚಾರ ಸಣ್ಣ ವಿಚಾರ ಅಲ್ಲ ಅದು ದೇಶವನ್ನು ಎರಡನೇ ಭಾರೀ ವಿಭಜನೆ ಮಾಡಲು ಉಂಟಾಗಿರುವ ಬೀಜಾಂಕುರ ಎಂದು ಹೇಳಿದರು.

ಇದೀಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರಕಾರ ಹಿಜಬ್ ವಿವಾದದ ಸಂಬಂಧ ಹೆದರಿಕೊಂಡಿದ್ದು, ಆರು ಜನ ವಿಧ್ಯಾರ್ಥಿನಿಯರಿಗೆ ಈ ದೇಶ ರಾಜ್ಯ ನಡುಗಿ ಬಿಟ್ಟಿದ್ದು, ಹೈಕೋರ್ಟ್ ಹೇಳಿದರೂ ಕೂಡ ರಾಜ್ಯ ಸರಕಾರ ಶಾಲೆ ನಡೆಸದೇ ಇರುವುದು ಬೇಸರ ತರಿಸಿದೆ ಎಂದು ಹೇಳಿದರು.

ರಾಜಕೀಯ ನಾಯಕರ ಲಾಭಕ್ಕೆ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರ ಮನವಿ – VIshwanews24

 

Leave a Reply