ಹಿಜಾಬ್ ತೀರ್ಪು : ಸುಪ್ರೀಂ ಕೋರ್ಟಿನಿಂದ ಆರಂಭಿಕ ಜಯ ಸಿಕ್ಕಿದ್ದು, ಮುಂದೆ ಉತ್ತಮ ಆದೇಶ ಬರುವ ನಿರೀಕ್ಷೆ: ಯಶ್ಪಾಲ್ ಸುವರ್ಣ – Vishwanews24
ಹಿಜಾಬ್ ತೀರ್ಪು : ಸುಪ್ರೀಂ ಕೋರ್ಟಿನಿಂದ ಆರಂಭಿಕ ಜಯ ಸಿಕ್ಕಿದೆ : ಯಶ್ಪಾಲ್ ಸುವರ್ಣ
ವಿಜಯಪುರ: ಹಿಜಾಬ್ ವಿಚಾರದಲ್ಲಿ ಸುಪ್ರೀಂ ನ್ಯಾಯಮೂರ್ತಿಗಳು ಹೈಕೋರ್ಟ್ ತೀರ್ಪು ಎತ್ತಿ ಹಿಡಿದ್ದಿದ್ದು, ಅರ್ಜಿದಾರರ ಅರ್ಜಿ ತಿರಸ್ಕಾರ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸುಪ್ರೀಂ ನ್ಯಾಯಮೂರ್ತಿಗಳು ತ್ರೀಸದಸ್ಯ ಪೀಠದಲ್ಲಿ ಚರ್ಚೆ ಮಾಡುವ ಮೂಲಕ ತೀರ್ಪು ಕೊಡ್ತೇವೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ನಿಂದ ಆರಂಭಿಕ ಜಯ ಸಿಕ್ಕಿದ್ದು, ಮುಂದೆಯು ಉತ್ತಮ ಆದೇಶ ಬರುವ ನಿರೀಕ್ಷೆ ಇದೆ
ದೇಶದ ಜನ ಬಹಳ ಕಾತರಾಗಿದ್ದರು ಆದರೆ ನಮಗೆ ಯಾವುದೇ ಆತಂಕ ಇರಲಿಲ್ಲ. ಶಿಕ್ಷಣ ಬಡ ವಿದ್ಯಾರ್ಥಿಗಳ ಶಿಕ್ಷಣ ಜೊತೆಗೆ ಚೆಲ್ಲಾಟ ಆಡೋಕೆ ಯಾರು ಅವಕಾಶ ಕೊಡುವುದಿಲ್ಲ. ಶಿಕ್ಷಣದ ಮಹತ್ವ ಎತ್ತಿಹಿಡಿದುಕೊಂಡು ಸುಪ್ರೀಂಕೋರ್ಟ್ ಒಳ್ಳೇ ಆದೇಶ ಕೊಡುತ್ತದೆ ಎಂದರು.
ಮಲ್ಪೆ : ಬಂದರುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಳು ತುಂಬಿಕೊಂಡು ಬೋಟಿನ ಲಂಗರು ಮತ್ತು ಸಂಚಾರಕ್ಕೆ ತೊಂದರೆ ..
ಹಿಜಾಬ್ ವಿವಾದ ಆರಂಭವಾಗಿದ್ದು ಉಡುಪಿಯಲ್ಲಿ ಆದರೆ ಇದು ನಂತರ ದಿನಗಳಲ್ಲಿ ರಾಜ್ಯಾದ್ಯಂತ ವ್ಯಾಪಿಸಿತು. ಹಿಜಾಬ್ ವಿದ್ಯಾರ್ಥಿನಿಯರು ಬಡವಿದ್ಯಾರ್ಥಿಗಳ ದಿಕ್ಕು ತಪ್ಪಿಸುವುದರ ಮೂಲಕ ಶಿಕ್ಷಣದ ವ್ಯವಸ್ಥೆ ಹಾಳು ಮಾಡಿದ್ದರು. 2004 ರಿಂದಲೂ ಉಡುಪಿಯ ಮಹಿಳಾಕಾಲೇಜಿನಲ್ಲಿ ಶಿಸ್ತು ಇದ್ದು, ಇದಕ್ಕಾಗಿ ಡ್ರೆಸ್ ಕೋಡ್ ಮಾಡಿದ್ದೇವು. ಅಲ್ಲಿಂದ ಕಳೆದ ಡಿಸೆಂಬರ್ ವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಬಳಿಕ ಹಿಬಾಜ್ ವಿದ್ಯಾರ್ಥಿನಿಯರ ನಾಟಕದಿಂದ ಇಷ್ಟೆಲ್ಲ ಸಮಸ್ಯೆ ಆಗಿದ್ದು, ಮಕ್ಕಳ ಜೀವನದಲ್ಲಿ ಅವರು ಚೆಲ್ಲಾಟ ಆಡಿದ್ದಾರೆ ಎಂದರು.
ಹಿಜಾಬ್ ಹಿಂದೆ ಇದ್ದ ಸಂಘಟನೆಗಳು ದೇಶದ್ರೋಹಿ, ಮತಾಂಧ ಶಕ್ತಿಗಳು ಮತ್ತು ವಿದ್ಯಾರ್ಥಿನಿಯರಿಗೆ ಟೆರರ್ ಲಿಂಕ್ ಇರುವ ಬಗ್ಗೆ ನಾನು ಮಾತನಾಡಿದ್ದೆ. ಇಂದು ಇವರಿಗೆ ಸಪೋರ್ಟ್ ನೀಡಿದವರೆಲ್ಲ ಈಗ ಜೈಲಲ್ಲಿದ್ದಾರೆ. ಅವರೆಲ್ಲರೂ ದೇಶದ್ರೋಹಿ ಚಟುವಟಿಕೆ,ಮರ್ಡರ್ ಕೇಸಗಳಲ್ಲಿ ಭಾಗಿಯಾಗಿರೋದು ಸಾಬೀತಾಗಿದೆ. ನರೇಂದ್ರ ಮೋದಿ,ಅಮೀತ್ ಶಾ ನೇತೃತ್ವದ ಕೇಂದ್ರ ಸರ್ಕಾರ ಪಿಎಫ್ಐ ಎಸ್ಡಿಪಿಐ ಸೇರಿ ಐದು ಸಂಘಟನೆಗಳು ಬ್ಯಾನ್ ಆಗಿವೆ. ಇಂತವರಿಂದ ಪ್ರೇರಣೆ ಪಡೆದವರ ಅರ್ಜಿಯನ್ನು ಖಂಡಿತವಾಗಿಯೂ ಸುಪ್ರೀಂಕೋರ್ಟ್ ಎತ್ತಿ ಹಿಡಿಯಲ್ಲ ಅನ್ನೋ ಭರವಸೆ ಇದೆ ಎಂದರು.

