Featured

ಹಿಜಾಬ್ ವಿವಾದ : ಸುಪ್ರೀಂ​ ತೀರ್ಪನ್ನು ಸ್ವಾಗತಿಸುತ್ತೇವೆ ; ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಯಮ ಯಥಾಸ್ಥಿತಿ : ಶಿಕ್ಷಣ ಸಚಿವ ಬಿಸಿ ನಾಗೇಶ್

ಹಿಜಾಬ್ ವಿವಾದ : ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ; ಧಾರ್ಮಿಕ ಆಚರಣೆಗೆ ಶಾಲೆಗಳಲ್ಲಿ ಅವಕಾಶವಿಲ್ಲ: ಶಿಕ್ಷಣ ಸಚಿವ ಬಿಸಿ ನಾಗೇಶ್

ಬೆಂಗಳೂರು: ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸುತ್ತೇವೆ. ಪ್ರಪಂಚದ ಎಲ್ಲೆಡೆ ಸ್ತ್ರೀಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಒಳ್ಳೇ ತೀರ್ಪು ಬರುತ್ತೆ ಎನ್ನುವ ನಿರೀಕ್ಷೆ ಸರ್ಕಾರಕ್ಕೆ ಇತ್ತು. ಆದರೆ ಇದು ವಿಭಜಿತ ತೀರ್ಪು ಬಂದಿದೆ. ಮುಂದಿನ ತೀರ್ಪಿಗೆ ಸರ್ಕಾರ ಕಾಯುತ್ತೆ. ಹೈಕೋರ್ಟ್​ ತೀರ್ಪಿಗೆ ಸರ್ಕಾರ ಕಾಯುತ್ತೆ. ಸರ್ಕಾರದ ಶಿಕ್ಷಣ ಕಾಯ್ದೆಯ ಪ್ರಕಾರ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ. ಸರ್ಕಾರಿ ಮತ್ತು ಎಲ್ಲ ಶಾಲೆಗಳು ಅದೇ ಕಾಯ್ದೆಯ ಪ್ರಕಾರ ನಡೆಯುತ್ತೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಕರ್ನಾಟಕ ಹಿಜಾಬ್ ಸಂಬಂಧ ಸುಪ್ರೀಂಕೋರ್ಟ್​ ತೀರ್ಪು ಪ್ರಕಟವಾದ ನಂತರ ಇದಕ್ಕೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯೆ ನೀಡಿದರು. ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಆಚರಣೆ, ಚಿಹ್ನೆಗಳ ಪ್ರದರ್ಶನ ಸಲ್ಲದು ಎಂದು ಸರ್ಕಾರದ ನಿಲುವು ಪುನರುಚ್ಚರಿಸಿದರು. ಇದನ್ನೂ ಓದಿ: ಮಣಿಪಾಲ: ಅಪಘಾತದಲ್ಲಿ ವಿದ್ಯಾರ್ಥಿಯ ಮೆದುಳು ನಿಷ್ಕ್ರೀಯ.. ಅಂಗಾಂಗ ದಾನದ ಮೂಲಕ ಸಾರ್ಥಕತೆ ಮೆರೆದ ಎಂ ಐ ಟಿ ವಿದ್ಯಾರ್ಥಿ – Vishwanews24

ವಿಶ್ವದಾದ್ಯಂತ ಮಹಿಳೆಯರು ಹಿಜಾಬ್ ವಿರುದ್ಧ ಬೀದಿಗಿಳಿದಿದ್ದಾರೆ. ಇರಾನ್​ನಂಥ ಇಸ್ಲಾಮಿಕ್ ದೇಶಗಳಲ್ಲಿಯೇ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ತೀರ್ಪು ಸಹ ಕರ್ನಾಟಕ ಹೈಕೋರ್ಟ್ ತೀರ್ಪು ಎತ್ತಿಹಿಡಿಯಬಹುದು ಎಂದು ನಿರೀಕ್ಷಿಸಿದ್ದೆ. ಹಾಗೆಂದು ನಾನು ಸುಪ್ರೀಂಕೋರ್ಟ್ ವಿರುದ್ಧ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಜಾಬ್ ಕುರಿತು ನಮ್ಮ ಸರ್ಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯು ಊರ್ಜಿತದಲ್ಲಿ ಇರುತ್ತದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

Vishwa News 24

Recent Posts

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

7 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

7 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

7 hours ago

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ – vishwanews24

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…

8 hours ago

ಮಂಗಳೂರು:ಕೋರಿಯರ್ ಮೂಲಕ ಎಂಡಿಎಂಎ ಸಾಗಾಟದ ಜಾಲ ಪತ್ತೆ: ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ – vishwanews24

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…

8 hours ago

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – vishwanews24

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…

8 hours ago