ಹುಬ್ಬಳ್ಳಿ: ಹಿಂದೂ ಧರ್ಮದ ಹುಡುಗಿಯರನ್ನು ಬೇರೆ ಧರ್ಮದವರು ಮದುವೆ ಆಗಲೇಬಾರದು. ಯಾಕೆ ಆಗಬೇಕು? ಹಿಂದೂ ಹುಡುಗಿಯರ ಜೊತೆ ನೀವು ಲವ್ ಯಾಕೆ ಮಾಡುತ್ತೀರಿ? ಅದರಿಂದಲೇ ತಾನೆ ಇಷ್ಟೆಲ್ಲ ಕ್ರೌರ್ಯ ಆಗುತ್ತಿರುವುದು. ನಿಮ್ಮ ಪಾಡಿಗೆ, ನಿಮ್ಮ ಸಮುದಾಯದವರನ್ನೇ ಮದುವೆ ಆಗಿ. ಹಿಂದೂ ಹುಡುಗಿಯರ ಜೊತೆ ನಿಮಗೆ ಏನು ಕೆಲಸ? ನಿಮ್ಮ ಸಮುದಾಯದಲ್ಲೇ ಬೇಕಾದರೆ ಒಂದಲ್ಲ ಎರಡಲ್ಲ 5 ಮದುವೆ ಮಾಡಿಕೊಳ್ಳಿ. ನಿಮ್ಮನ್ನು ಯಾರು ಕೇಳ್ತಾರೆ? ಇನ್ನೊಮ್ಮೆ ಹಿಂದೂಗಳ ತಂಟೆಗೆ ಬರಬೇಡಿ’ ಎಂದು ನಟ ಪ್ರಥಮ್ ಹೇಳಿದ್ದಾರೆ.
ಹುಬ್ಬಳ್ಳಿ ವಿಧ್ಯಾರ್ಥಿನಿ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ನಟ ಪ್ರಥಮ್ ಅವರು ನೇಹಾ ತಂದೆ-ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಲಾವಿದರು ಎಲೆಕ್ಷನ್ ಪ್ರಚಾರಕ್ಕೆ ಬರುತ್ತಾರೆ. ಇಂಥ ಘಟನೆ ಆದಾಗ ಯಾರೂ ಬರಲ್ಲ. ಅಂಥ ಕಲಾವಿದರನ್ನು ತಲೆ ಮೇಲೆ ಇಟ್ಟುಕೊಂಡು ಮೆರೆಸಬೇಡಿ ಎಂದರು.
ನನಗೆ ತುಂಬ ನೋವಾಯಿತು. ಅದಕ್ಕಾಗಿಯೇ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇನೆ. ಕಡೆಗಣಿಸಿದರೆ ಪ್ರಾಣ ತೆಗೆದುಬಿಡೋದಾ? ನನ್ನ ಮಗ ಅಂಥವನಲ್ಲ ಎಂದು ಅವರ ತಾಯಿ ಹೇಳ್ತಾರೆ. ವೀರಪ್ಪ ನಾಯಕ ಸಿನಿಮಾದ ಕಥೆ ರೀತಿ ಹೇಳಿಕೆ ನೀಡ್ತಾರೆ. 20 ವರ್ಷದ ಹಿಂದೆ ಇವರು ಸಿಕ್ಕಿದ್ದಿದ್ರೆ ನಿರ್ದೇಶಕರು ಶ್ರುತಿ ಬದಲಿಗೆ ಇವರನ್ನೇ ಆಯ್ಕೆ ಮಾಡುತ್ತಿದ್ದರು’ ಎಂದಿದ್ದಾರೆ ಪ್ರಥಮ್.
ಈಗ ಯಾರೋ ಬಂದು ಸಮಾಧಾನ ಹೇಳಿದರು. ಸಮಾಧಾನ ಹೇಳುವುದೇ ಹೌದಾದರೆ ಅವರ ಸಮುದಾಯದ ಯಾರೂ ಕೂಡ ಈ ಕೇಸ್ ತೆಗೆದುಕೊಳ್ಳಬಾರದು ಅಂತ ಹೇಳಿ. ಮುಖಂಡರು ಹೇಳಿಕೆಗಳನ್ನು ಕೊಡುವಾಗ ನೋವು ಮಾಡಬೇಡಿ. ಇದರ ಜೊತೆ ಪಾಲಕರಿಗೆ ಒಂದು ಕಿವಿಮಾತು. ನಿಮ್ಮ ಮಕ್ಕಳು ಯಾರ ಜೊತೆ ಇರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಗಮನಿಸಿ. ಅವನು 9 ಸಲ ಚುಚ್ಚಿದ್ದಾನೆ ಎಂದರೆ ಅವನ ಮನಸ್ಥಿತಿ ಎಷ್ಟು ವಿಕೃತ ಆಗಿದೆ ನೋಡಿ. ಈ ವಿಚಾರದಲ್ಲಿ ರಾಜಕೀಯ ಬೇಡ. ಸಿನಿಮಾದ ಪ್ರಚಾರಕ್ಕೆ ಈ ಊರಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ಈಗ ಸಾವಿನ ಮನೆಗೆ ಬರುವಂತೆ ಆಗಿದೆ’ ಎಂದು ಪ್ರಥಮ್ ಹೇಳಿದ್ದಾರೆ.
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ…
ಮಂಗಳೂರು : ಅ.2ರಂದು ಜಿಲ್ಲಾ ಯುವ ಕಾಂಗ್ರೆಸ್‌ನಿಂದ ‘ಸದ್ಭಾವನಾ ನಡಿಗೆ’ ಮಂಗಳೂರು: ಗಾಂಧಿ ಜಯಂತಿ ಪ್ರಯುಕ್ತ ದ.ಕ.ಜಿಲ್ಲಾ ಯುವ ಕಾಂಗ್ರೆಸ್…
ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಪಂಚಾಶತ್ ಜನ್ಮ ವೈಭವ’ ಅ.3ರಿಂದ ಧಾರ್ಮಿಕ ಕಾರ್ಯಕ್ರಮಗಳ ಚಾಲನೆ.. ವರ್ಷಪೂರ್ತಿ ಗೋಸೇವೆ, ಅನ್ನದಾನ, ಆರೋಗ್ಯ–ಶಿಕ್ಷಣ ಸೇವೆ…
ಸೌಜನ್ಯಾ ಪ್ರಕರಣದ ಮರುತನಿಖೆ: ಮಂಗಳೂರಿಗೆ ಆಗಮಿಸಿದ ನೂತನ ಎಸ್ಐಟಿ ತಂಡ ಮಂಗಳೂರು : ಸೌಜನ್ಯಾ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ…
ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…
ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…