ಹೂ ಗುಚ್ಛ ಸ್ಮರಣಿಕೆ ನೀಡುವ ಬದಲು ನೋಟ್ ಪುಸ್ತಕ ನೀಡಿ ಇದನ್ನು ಸಂಗ್ರಹಿಸಿ ನಾನು ಶಾಲಾ ಮಕ್ಕಳಿಗೆ ನೀಡುತ್ತೇನೆ : ಶಾಸಕ ಭರತ್ ಶೆಟ್ಟಿ – Vishwanews24
ಮಂಗಳೂರು: ಸಂಪ್ರದಾಯವನ್ನು ಮುರಿದು ಫಲಪುಷ್ಪ ಹೂ ಗುಚ್ಛದ ಬದಲಾಗಿ ಬರೆಯುವಂತಹ ನೋಟ್ ಪುಸ್ತಕಗಳನ್ನು ಕಾಣಿಕೆಯಾಗಿ ಯು ಗೌರವಾರ್ಥವಾಗಿ ಯೂ ನೀಡಿದರೆ ಅದು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಬಹುದು ನಾನು ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸಹಾಯದ ರೂಪದಲ್ಲಿ ನೀಡುವುದಕ್ಕೆ ನೀವು ಕೊಟ್ಟ ಗೌರವಾರ್ಥ ದ ಪುಸ್ತಕಗಳು ಆ ಮಕ್ಕಳಿಗೆ ಮತ್ತಷ್ಟು ಸಹಾಯಕವಾಗಬಹುದು ಎಂದು ಭರತ್ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ.
” ನನ್ನ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ನಾಗರಿಕ ಬಂಧುಗಳಲ್ಲಿ ವಿನಂತಿ. ಶಾಸಕನ ನೆಲೆಯಲ್ಲಿ ನಾನು ಅನೇಕ ಕಾರ್ಯಕ್ರಮಗಳಲ್ಲಿ ನಿಮ್ಮೊಂದಿಗೆ ಭಾಗವಹಿಸುತ್ತಿದ್ದೇನೆ. ನಿಮ್ಮ ಗೌರವಪೂರ್ವಕವಾಗಿ ಹೂ ಹಾರ, ಹೂಗುಚ್ಚ, ಸ್ಮರಣಿಕೆ ಕೊಡುತ್ತೀರಿ. ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ. ಆದರೆ ಹೂಹಾರ, ಬೊಕ್ಕೆಗಳನ್ನು ಕೊಡುವುದಕ್ಕಿಂತ ತಾವು ನೋಟ್ ಬುಕ್ ಗಳನ್ನು ಕೊಟ್ಟರೆ ಅವುಗಳನ್ನು ಸಂಗ್ರಹಿಸಿ ಶಾಲಾ ಮಕ್ಕಳಿಗೆ ಕೊಡಬಹುದು. ಅವು ಹಾಳಾಗುವುದಿಲ್ಲ ಮತ್ತು ವ್ಯರ್ಥವೂ ಆಗುವುದಿಲ್ಲ.
ಇನ್ನು ಮುಂದೆ ಹೂ ಗುಚ್ಛ ಸ್ಮರಣಿಕೆ ನೀಡುವ ಬದಲು ನೋಟ್ ಪುಸ್ತಕ ನೀಡಿ ಇದನ್ನು ಸಂಗ್ರಹಿಸಿ ಶಾಲಾ ಮಕ್ಕಳಿಗೆ ನೀಡುವುದಾಗಿ ತಿಳಿಸಿದ್ದಾರೆ. ಪ್ರತಿದಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ನೂರಾರು ಖರ್ಚು ಮಾಡಿ ಹೂವು ಹಣ್ಣು ಹಂಪಲು ತಂದು ಫೋಲು ಮಾಡುವ ಬದಲು ಅದರ ಹಣದಲ್ಲಿ ನೋಟ್ ಪುಸ್ತಕ ನನಗೆ ನೀಡಿದರೆ ಶಾಲಾ ಮಕ್ಕಳಿಗೆ ನೆರವು ನೀಡಿದಂತೆ ಆಗುತ್ತದೆ. ಕಾರ್ಯಕ್ರಮ ಸಂಘಟಿಸಿದವರಿಗೆ ನೆರವು ನೀಡಿದ ಸಂತಸವು ಇರುತ್ತದೆ. ಈ ಅಭಿಯಾನ ಒಂದೆರಡು ದಿನಕ್ಕೆ ಸೀಮಿತವಾಗದೆ ಮುಂದುವರಿಯಬೇಕು ಕಾರ್ಯಕರ್ತರು, ಕಾರ್ಯಕ್ರಮ ಆಯೋಜಕರು ಈ ಕುರಿತಾಗಿ ಸಕಾರಾತ್ಮಕವಾಗಿ ಚಿಂತಿಸಿ ಈ ಕೆಲಸದಲ್ಲಿ ನನ್ನೊಂದಿಗೆ ಕೈಜೋಡಿಸಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿ ಕೊಂಡಿದ್ದಾರೆ.
ಇನ್ನು ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ತ ನಾನು ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಸಂಚರಿಸಲಿದ್ದೇನೆ. ನಾನು ನಮ್ಮ ಕಾರ್ಯಕರ್ತರಲ್ಲಿ ವಿನಂತಿ ಮಾಡುವುದೇನೆಂದರೆ ನಾನು ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ವಾರ್ಡ್, ಗ್ರಾಮಗಳಲ್ಲಿ ಬರುವಾಗ ಎಲ್ಲೆಲ್ಲಿ ಕಾರ್ನರ್ ಮೀಟಿಂಗ್, ಸಭೆ, ಮನೆಮನೆ ಪ್ರಚಾರ ನಡೆಯುವ ಏರಿಯಾಗಳಲ್ಲಿ ಒಂದೊಂದು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಚುನಾವಣಾ ಪ್ರಚಾರ ನಡೆಸೋಣ. ಈ ಮೂಲಕ ನರೇಂದ್ರ ಮೋದಿಜಿಯವರ ಪರಿಸರ ಕಾಳಜಿಗಾಗಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಬೆಂಬಲಿಸೋಣ. ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಇದನ್ನು ಅನುಷ್ಟಾನಕ್ಕೆ ತರುವಲ್ಲಿ ನನ್ನೊಡನೆ ಕೈಜೋಡಿಸುತ್ತಿರಿ ಎಂದು ಅಂದುಕೊಂಡಿದ್ದೇನೆ ‘ ಇದು ಭರತ್ ಶೆಟ್ಟಿ ಅವರ ಕಳಕಳಿಯ ಮನವಿ. ಎಂದು ಸಾರ್ವಜನಿಕರಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ವಿನಂತಿಸಿ ಕೊಂಡಿದ್ದಾರೆ.
