ಹೃದಯಾಘಾತ : ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ನಿಧನ – vishwanews24

Featured, ರಾಷ್ಟ್ರ ನ್ಯೂಸ್

ಹೃದಯಾಘಾತ : ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ  ನಿಧನ

ಹೈದರಾಬಾದ್: ಟಾಲಿವುಡ್ ಖ್ಯಾತ ಹಾಸ್ಯ ನಟ ರಾಜೇಂದ್ರ ಪ್ರಸಾದ್ ಅವರ ಪುತ್ರಿ ಗಾಯತ್ರಿ ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ವರದಿಯಾಗಿದೆ.

ಶುಕ್ರವಾರ ಹೃದಯಾಘಾತಕ್ಕೆ ಒಳಗಾದ ಗಾಯತ್ರಿ ಅವರನ್ನು ಕುಟುಂಬ ಸದಸ್ಯರು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಾಯತ್ರಿ ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ರಾಜೇಂದ್ರ ಪ್ರಸಾದ್ ಅವರಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಇದ್ದು ಇದೀಗ ಪುತ್ರಿಯ ಅಕಾಲಿಕ ಮರಣದಿಂದ ಕುಟುಂಬ ಕಂಗೆಟ್ಟಿದೆ. ಗಾಯತ್ರಿ ಅಕಾಲಿಕ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ.

ಖ್ಯಾತ ನಟರಾಗಿರುವ ರಾಜೇಂದ್ರ ಪ್ರಸಾದ್, ಮೊದಲು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವೃತ್ತಿ ಜೀವನ ಆರಂಭಿಸಿ ನಂತರ ಕಾಮಿಡಿ ಹೀರೋ ಆದರು. ತೆಲುಗು ಪ್ರೇಕ್ಷಕರಿಗೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು. ಸದ್ಯ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿದ್ದಾರೆ.

Leave a Reply