ಮಂಡ್ಯ: 3 ದಿನಗಳ ಹಿಂದೆ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಕೆ.ಆರ್.ಪೇಟೆ ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್(28) ಮೃತ ದುರ್ದೈವಿ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿ ಆಗಿದ್ದ ಶಶಾಂಕ್. ಜಾರ್ಖಂಡ್ ಮೂಲದ ಅಷ್ಣಾರ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದರು. ಈ ವಿಚಾರವನ್ನು ಮನೆಯವರಿಗೆಲ್ಲಾ ತಿಳಿಸಿ, ಒಪ್ಪಿಗೆ ಪಡೆದು ಮಾ.2ರಂದು ಮೈಸೂರಿನ ರೆಸಾರ್ಟ್ವೊಂದರಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು.
ಮದುವೆ ದಿನವೂ ಶಶಾಂಕ್ ಸ್ವಲ್ಪ ಜ್ವರ ಇದೆ ಎಂದು ಸ್ನೇಹಿತರೊಂದಿಗೆ ಹೇಳಿಕೊಂಡಿದ್ದರು. ಮಂಗಳವಾರ ಶಶಾಂಕ್‌ಗೆ ಬೆಂಗಳೂರಿನ ನಿವಾಸದಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಶಶಾಂಕ್ ಪತ್ನಿ, ತಂದೆ-ತಾಯಿ, ಸ್ನೇಹಿತರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಉಡುಪಿ : ಯುವತಿ ನಾಪತ್ತೆ ಉಡುಪಿ: ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತೀಕ್ಷಾ (18) ಎನ್ನುವ ಯುವತಿಯು ಆಗಸ್ಟ್…
ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ ಮಂಗಳೂರು…
ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…
ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ…
ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ…