ಹೃದಯಾಘಾತ : ಮದುವೆಗೆ ಒಂದು ದಿನ ಇರುವಾಗಲೇ ಯುವಕ ನಿಧನ – vishwanews24
ಹೃದಯಾಘಾತ : ಮದುವೆಗೆ ಒಂದು ದಿನ ಇರುವಾಗಲೇ ಯುವಕ ನಿಧನ
ಚಿಕ್ಕೋಡಿ: ಮದುವೆಗೆ ಒಂದು ದಿನ ಬಾಕಿಯಿರುವಾಗಲೇ ಹೃದಯಾಘಾತದಿಂದ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾಡ ಗ್ರಾಮದಲ್ಲಿ ನಡೆದಿದೆ.
ಜುಂಜರವಾಡ ಆರ್‌ಸಿ ಗ್ರಾಮದ ನಿವಾಸಿ ಸದಾಶಿವ ರಾಮಪ್ಪ (31) ಹೋಸಲ್ಕಾರ ಮೃತ ವ್ಯಕ್ತಿ.
ಉಡುಪಿ : ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ – ಜಿಲ್ಲೆಯ 15 ಮಂದಿ ಆಯ್ಕೆ – vishwanews24
ಸಂಬ0ಧಿಕರು ಹಾಗೂ ಕುಟುಂಬಸ್ಥರು ಸೆಪ್ಟೆಂಬರ್ 5ರಂದು ಮದುವೆಗೆ ದಿನಾಂಕ ನಿಗದಿಪಡಿಸಿದ್ದರು. ಮಂಗಳವಾರ ರಾತ್ರಿ ಎಂಟು ಗಂಟೆ ಆಸುಪಾಸಿನಲ್ಲಿ ಮನೆ ಮುಂದೆ ಮದುವೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ನಾಳೆ ನಡೆಯಲಿದ್ದ ಮದುವೆ ಸಿದ್ಧತೆಗಾಗಿ ದೂರವಾಣಿಯಲ್ಲಿ ಮಾತನಾಡುವ ವೇಳೆ ಈ ಅವಘಡ ಸಂಭವಿಸಿದ್ದು, ತೀವ್ರ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ತಕ್ಷಣವೇ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ರವಾನಿಸಿದರೂ ಬದುಕುಳಿಯಲಿಲ್ಲ.
ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಂಗಳೂರು : ಮಹಿಳೆ ಅಸ್ವಸ್ಥ – ಬಸ್ಸನ್ನು ಆಸ್ಪತ್ರೆಗೆ ಕೊಂಡೊಯ್ದು ಮಾನವೀಯತೆ ಮೆರೆದ ಚಾಲಕ, ನಿರ್ವಾಹಕ – vishwanews24
