Featured

ಹೆಚ್ಚು ಮದ್ಯಪಾನ ಮಾಡುವಂತೆ ಯುವಜನರಿಗೆ ಜಪಾನ್ ಮನವಿ – Vishwanews24

ಹೆಚ್ಚು ಮದ್ಯಪಾನ ಮಾಡುವಂತೆ ಯುವಜನರಿಗೆ ಜಪಾನ್ ಮನವಿ ..

ಆಲ್ಕೋಹಾಲ್ ಸೇವನೆ ಹೆಚ್ಚಿಸಲು ವಿಶಿಷ್ಟ ಆಂದೋಲನ ಆರಂಭ..

ಟೋಕಿಯೋ: ಆದಾಯ ಸಂಗ್ರಹಣೆಯಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ತನ್ನ ಪ್ರೌಢ ವಯಸ್ಕರಿಗೆ ಹೆಚ್ಚೆಚ್ಚು ಮದ್ಯ ಸೇವನೆ ಮಾಡುವಂತೆ ಜಪಾನ್ ಮನವಿ ಮಾಡಿದೆ. ಆರ್ಥಿಕತೆಯನ್ನು ವೃದ್ಧಿಸಲು ಮತ್ತು ಕೋವಿಡ್ ಸಾಂಕ್ರಾಮಿಕದ ಕಾರಣ ಉಲ್ಬಣಗೊಂಡಿರುವ ಜನಸಂಖ್ಯಾ ಬಿಕ್ಕಟ್ಟನ್ನು ತಗ್ಗಿಸಲು ಜಪಾನ್ ಸರ್ಕಾರ, ಆಲ್ಕೋಹಾಲ್ ಮಾರಾಟ ಹೆಚ್ಚಳದ ಪ್ರಯತ್ನಕ್ಕೆ ಮುಂದಾಗಿದೆ.

ತನ್ನ ಯುವಜನರ ನಡುವೆ ಆಲ್ಕೋಹಾಲ್ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ತೆರಿಗೆ ಸಂಸ್ಥೆ (ಎನ್‌ಟಿಎ) ‘ಸೇಕ್ ವೈವಾ’ ಎಂಬ ರಾಷ್ಟ್ರೀಯ ವ್ಯವಹಾರ ಸ್ಪರ್ಧೆಯನ್ನು ಆಯೋಜಿಸುವುದಾಗಿ ಪ್ರಕಟಿಸಿದೆ.

ಸೇಕ್, ಶೋಚು, ಅವಾಮೊರಿ, ಬಿಯರ್, ವಿಸ್ಕಿ ಮತ್ತು ವೈನ್ ಸೇರಿದಂತೆ ಜಪಾನ್‌ನ ಆಲ್ಕೋಹಾಲಿಕ್ ಪಾನೀಯಗಳಿಗೆ ಬೇಡಿಕೆ ಹೆಚ್ಚಿಸಲು ಸಹಾಯ ಮಾಡುವಂತಹ ವಿಭಿನ್ನ ಬಗೆಯ ಆಲೋಚನೆ, ಉಪಾಯಗಳನ್ನು ನೀಡುವಂತೆ ಈ ಆಂದೋಲನದ ಮೂಲಕ ಯುವಜನರಿಗೆ ಮನವಿ ಮಾಡಲಾಗಿದೆ.

ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಲಿಂಕ್ ಕ್ಲಿಕ್ ಮಾಡೋ ಮುನ್ನ ಎಚ್ಚರ!

ಲಿಕ್ಕರ್ ಉದ್ಯಮವನ್ನು ಪುನಶ್ಚೇತನಗೊಳಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕೊಡುಗೆ ಸಲ್ಲಿಸುವುದು ತನ್ನ ಉದ್ದೇಶವಾಗಿದೆ ಎಂದು ಜಪಾನ್ ತೆರಿಗೆ ಸಂಸ್ಥೆ ತಿಳಿಸಿದೆ. ಆಲ್ಕೋಹಾಲಿಕ್ ಪಾನೀಯಗಳ ಬಳಕೆಯನ್ನು ಪುನಶ್ಚೇತನಗೊಳಿಸಲು 20 ರಿಂದ 39ರ ವಯೋಮಾನದ ಜನರಿಂದ ವಿನೂತನ ಬಗೆಯ ಉಪಾಯಗಳನ್ನು ‘ಸೇಕ್ ವೈವಾ’ ಆಂದೋಲನದ ಮೂಲಕ ಆಹ್ವಾನಿಸಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಸರಣಿ ಲಾಕ್‌ಡೌನ್‌ಗಳು ಮತ್ತು ಕೋವಿಡ್ ನಿಯಂತ್ರಣ ನಿರ್ಬಂಧಗಳಿಂದ ಬದಲಾಗಿರುವ ಜನರ ಜೀವನ ಕ್ರಮ ಹಾಗೂ ವಿಭಿನ್ನ ಅಭಿರುಚಿಗಳಿಗೆ ಅನುಗುಣವಾಗಿ ಉತ್ಪನ್ನಗಳು ಮತ್ತು ವಿನ್ಯಾಸಗಳಿಗೆ ಹೊಸ ಪ್ರಸ್ತಾವನೆಗಳನ್ನು ಜನರು ಸಲ್ಲಿಸಬಹುದಾಗಿದೆ.

ಸ್ಪರ್ಧೆಯ ಅನುಸೂಚಿ ಪ್ರಕಾರ, ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಳ್ಳಲು ಯಾವುದೇ ಪ್ರವೇಶ ಶುಲ್ಕವಿಲ್ಲ. ಬ್ರ್ಯಾಂಡ್ ಮೌಲ್ಯವನ್ನು ಸುಧಾರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ, ಮೆಟಾವರ್ಸ್ ಮತ್ತು ಭೌಗೋಳಿಕ ಸಂಕೇತಗಳನ್ನು (ಆಯಾ ಭೌಗೋಳಿಕ ಮೂಲಕವನ್ನು ನಿರ್ದಿಷ್ಟವಾಗಿ ಸೂಚಿಸುವ ಉತ್ಪನ್ನಗಳ ಸಂಕೇತ) ಒಳಗೊಂಡ ಹೊಸ ಮಾರಾಟ ವಿಧಾನಗಳ ಕುರಿತಾದ ಸಲಹೆಗಳನ್ನು ನೀಡುವಂತೆ ಕೂಡ ಅದರಲ್ಲಿ ಮನವಿ ಮಾಡಲಾಗಿದೆ.

ಹೊಸದಾಗಿ 2.70 ಲಕ್ಷ ಕಾರ್ಡ್‌ ಹಂಚಿಕೆ : ಉಮೇಶ್‌ ಕತ್ತಿ – Vishwanews24

ಸ್ಪರ್ಧೆಯ ಅಂತಿಮ ಸ್ಪರ್ಧಿಗಳನ್ನು ಸೆಪ್ಟೆಂಬರ್ 27ರಂದು ಆಯ್ಕೆ ಮಾಡಲಾಗುತ್ತದೆ. ಇದರ ಬಳಿಕ ಅಕ್ಟೋಬರ್‌ನಲ್ಲಿ ಮತ್ತೊಂದು ಸುತ್ತು ನಡೆಯಲಿದೆ. ನವೆಂಬರ್ 10ರಂದು ಟೋಕಿಯೋದಲ್ಲಿ ಈ ಯೋಜನೆಯ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ.

ಎನ್‌ಟಿಎ ಪ್ರಕಾರ, 2020ರಲ್ಲಿ ಜಪಾನೀಯರು ಬಹಳ ಕಡಿಮೆ ಮದ್ಯ ಸೇವನೆ ಮಾಡಿದ್ದಾರೆ. 1995ಕ್ಕೆ ಹೋಲಿಸಿದರೆ ಕೋವಿಡ್ 19 ಕಾರಣದಿಂದ ಜಪಾನ್‌ನ ಅಬಕಾರಿ ವಿಭಾಗ ಭಾರಿ ಹೊಡೆದ ಅನುಭವಿಸಿದೆ. 1995ರಲ್ಲಿ ಜನರು 100 ಲೀಟರ್ (22 ಗ್ಯಾಲನ್) ಮದ್ಯ ಸೇವನೆ ಮಾಡಿದ್ದರೆ, 2020ರಲ್ಲಿ ಅದು 75 ಲೀಟರ್‌ಗೆ (16 ಗ್ಯಾಲನ್‌) ಇಳಿಕೆಯಾಗಿದೆ.

Vishwa News 24

Recent Posts

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

12 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

13 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

13 hours ago

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ – vishwanews24

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…

13 hours ago

ಮಂಗಳೂರು:ಕೋರಿಯರ್ ಮೂಲಕ ಎಂಡಿಎಂಎ ಸಾಗಾಟದ ಜಾಲ ಪತ್ತೆ: ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ – vishwanews24

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…

14 hours ago

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – vishwanews24

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…

14 hours ago