ಕಾಪು: ಜನಸಾಮಾನ್ಯರು ನೂರಾರು ಬಾರಿ ಮನವಿ ಮಾಡಿ ಪ್ರತಿಭಟನೆ ಮಾಡಿದ್ದರು ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಉಡಾಫೆ ತೋರಿದ್ದ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರ ಕಳೆದು ಮೂರು ದಿನದಿಂದ ಎದ್ದೊಬಿದ್ದೊ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಚಡಪಡಿಸುತ್ತಿದೆ.
ಈಗಾಗಲೇ ಹೆದ್ದಾರಿಗೆ ಡಾಂಬರು ತೇಪೆ ಹಾಕುವ ಕಾರ್ಯಮುಗಿದಿದ್ದು ಸೇತುವೆ ಮೇಲಿನ ಕಾಮಗಾರಿ ಪೂರ್ಣಗೊಳಿಸಲು ನಾಲ್ಕರಿಂದ ಐದು ಜೆಸಿಬಿಗಳು ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದೆ .
ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿ ಪ್ರಕ್ರಿಯೆ ಮುಗಿದಿರಲಿಲ್ಲ ಸ್ಥಳೀಯರು ,ಪ್ರಯಾಣಿಕರು ಅದೆಷ್ಟೋ ಬಾರಿ ಈ ಬಗ್ಗೆ ಜಿಲ್ಲಾಡಳಿತ ಮತ್ತು ಸಂಬಂಧ ಪಟ್ಟ ಇಲಾಖೆಗೆ ದೂರು ಮನವಿ ಸಲ್ಲಿಸಿದ್ದರು ಕ್ಯಾರೆ ಅನ್ನದ ಇಲಾಖೆಗಳು ಉಡುಪಿಗೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಹರಸಾಹಸ ಪಡುತ್ತಿದ್ದಾರೆ.
ಮತ ಹಾಕಿದ ಮತದಾರನಿಗೆ ಧೂಳು- ಮತಪಡೆದ ರಾಜನಿಗೆ ಹೈಫೈ ರೋಡ್
ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದ ಇದುವರೆಗೆ ಕೂಡ ಪಡುಬಿದ್ರಿ ಸೇತುವೆ ಬಳಿಯ 200 ಮೀಟರ್ ಉದ್ದದ ರಸ್ತೆ ಮಳೆಗಾಲದಲ್ಲಿ ಕೆಸರು ಇತರ ಸಮಯದಲ್ಲಿ ಧೂಳು ಉನ್ನುತ ಪ್ರಯಾಣಿಕ ಸಾಗುತ್ತಿದ್ದರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದ ಇಲಾಖೆಗಳು ಮಾತ್ರ ಹೆಜಮಾಡಿ ಬಂದರು ಶಿಲನ್ಯಾಸಕ್ಕೆ ಆಗಮಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಾಹನ ತೆರಳಲು ಹೊಸ ರಸ್ತೆ ನಿರ್ಮಾಣ ಮಾಡಿ ಭೇಷ್ ಅನ್ನಿಸಿಕೊಳ್ಳಲು ಮುಂದಾಗಿದೆ.
ಇನ್ನಾದರು ಧೂಳು ಕೆಸರುಮುಕ್ತ ಸಂಚಾರ ಆಗಲಿ
ಮುಖ್ಯಮಂತ್ರಿ ಹೆಜಮಾಡಿ ಬಂದರು ಶಿಲನ್ಯಾಸಕ್ಕೆ ಬರುವ ಕಾರಣದಿಂದಾದರು ಪಡುಬಿದ್ರಿ ಸೇತುವೆ ರಸ್ತೆ ಪೂರ್ಣಗೊಂಡು ವಾಹನ ಸವಾರರಿಗೆ ಮುಕ್ತವಾಗಲಿ ಮತ್ತು ಧೂಳು ಕೆಸರು ಗದ್ದೆಯ ಪಯಾಣಕ್ಕೆ ಮುಕ್ತಿ ಸಿಗಲಿ ಅನುತ್ತಾರೆ ಪ್ರಾಯಣಿಕ ಗಣೇಶ್ ಕುಮಾರ್.
ಬ್ಯೂರೋ ರಿಪೋರ್ಟ್
ವಿಶ್ವ ನ್ಯೂಸ್ 24
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…