ಹೆಜಮಾಡಿಗೆ ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ತ್ವರಿತ ಕಾಮಗಾರಿ – Vishwanews24

Featured, ಉಡುಪಿ

ಹೆಜಮಾಡಿಗೆ ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ತ್ವರಿತ ಕಾಮಗಾರಿ.

ಕಾಪು: ಜನಸಾಮಾನ್ಯರು ನೂರಾರು ಬಾರಿ ಮನವಿ‌ ಮಾಡಿ ಪ್ರತಿಭಟನೆ ಮಾಡಿದ್ದರು ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಉಡಾಫೆ ತೋರಿದ್ದ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರ ಕಳೆದು ಮೂರು ದಿನದಿಂದ ಎದ್ದೊಬಿದ್ದೊ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಚಡಪಡಿಸುತ್ತಿದೆ.


‌ಈಗಾಗಲೇ ಹೆದ್ದಾರಿಗೆ ಡಾಂಬರು ತೇಪೆ ಹಾಕುವ ಕಾರ್ಯ‌ಮುಗಿದಿದ್ದು ಸೇತುವೆ ಮೇಲಿನ ಕಾಮಗಾರಿ ಪೂರ್ಣಗೊಳಿಸಲು ನಾಲ್ಕರಿಂದ ಐದು ಜೆಸಿಬಿಗಳು ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದೆ .

    ಮುಖ್ಯಮಂತ್ರಿ ಆಗಮನಕ್ಕೆ ಸಿದ್ದಗೊಳ್ಳುತ್ತಿರುವ ರಸ್ತೆ

ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿ ಪ್ರಕ್ರಿಯೆ ಮುಗಿದಿರಲಿಲ್ಲ ಸ್ಥಳೀಯರು ,ಪ್ರಯಾಣಿಕರು ಅದೆಷ್ಟೋ ಬಾರಿ ಈ ಬಗ್ಗೆ ಜಿಲ್ಲಾಡಳಿತ ಮತ್ತು ಸಂಬಂಧ ಪಟ್ಟ ಇಲಾಖೆಗೆ ದೂರು ಮನವಿ ಸಲ್ಲಿಸಿದ್ದರು ಕ್ಯಾರೆ ಅನ್ನದ ಇಲಾಖೆಗಳು ಉಡುಪಿಗೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕಾಮಗಾರಿ ಮುಗಿಸಲು ಹರಸಾಹಸ ಪಡುತ್ತಿದ್ದಾರೆ.

ಮತ ಹಾಕಿದ ಮತದಾರನಿಗೆ ಧೂಳು- ಮತಪಡೆದ ರಾಜನಿಗೆ ಹೈಫೈ ರೋಡ್
‌ ಹೆದ್ದಾರಿ‌ ಕಾಮಗಾರಿ ಆರಂಭವಾದ ದಿನದಿಂದ ಇದುವರೆಗೆ ಕೂಡ ಪಡುಬಿದ್ರಿ ಸೇತುವೆ ಬಳಿಯ 200 ಮೀಟರ್ ಉದ್ದದ ರಸ್ತೆ ಮಳೆಗಾಲದಲ್ಲಿ ಕೆಸರು ಇತರ ಸಮಯದಲ್ಲಿ ಧೂಳು ಉನ್ನುತ ಪ್ರಯಾಣಿಕ ಸಾಗುತ್ತಿದ್ದರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದ ಇಲಾಖೆಗಳು‌ ಮಾತ್ರ ಹೆಜಮಾಡಿ ಬಂದರು ಶಿಲನ್ಯಾಸಕ್ಕೆ ಆಗಮಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಾಹನ ತೆರಳಲು ಹೊಸ ರಸ್ತೆ ನಿರ್ಮಾಣ ಮಾಡಿ ಭೇಷ್ ಅನ್ನಿಸಿಕೊಳ್ಳಲು ಮುಂದಾಗಿದೆ.

ಇನ್ನಾದರು ಧೂಳು ಕೆಸರು‌ಮುಕ್ತ ಸಂಚಾರ ಆಗಲಿ

ಮುಖ್ಯಮಂತ್ರಿ ಹೆಜಮಾಡಿ ಬಂದರು ಶಿಲನ್ಯಾಸಕ್ಕೆ ಬರುವ ಕಾರಣದಿಂದಾದರು ಪಡುಬಿದ್ರಿ ಸೇತುವೆ ರಸ್ತೆ ಪೂರ್ಣಗೊಂಡು ವಾಹನ ಸವಾರರಿಗೆ ಮುಕ್ತವಾಗಲಿ ಮತ್ತು ಧೂಳು ಕೆಸರು ಗದ್ದೆಯ ಪಯಾಣಕ್ಕೆ ಮುಕ್ತಿ ಸಿಗಲಿ ಅನುತ್ತಾರೆ ಪ್ರಾಯಣಿಕ ಗಣೇಶ್ ಕುಮಾರ್.

ಬ್ಯೂರೋ ರಿಪೋರ್ಟ್
ವಿಶ್ವ ನ್ಯೂಸ್ 24

ರಾಜ್ಯದಲ್ಲಿ ಇಂದಿನಿಂದ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ; ಉಲ್ಲಂಘಿಸಿದ್ರೆ 7 ವರ್ಷ ಜೈಲು, 5 ಲಕ್ಷ ರೂ. ದಂಡ -Vishwanews24