ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ:  ಸ್ಪಷ್ಟನೆ ನೀಡಿದ ಡಾಲಿ ಧನಂಜಯ್ – Vishwanews24

Featured, ರಾಜ್ಯ ನ್ಯೂಸ್

ಹೆಡ್ ಬುಷ್’ ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ:  ಸ್ಪಷ್ಟನೆ ನೀಡಿದ ಡಾಲಿ ಧನಂಜಯ್

ರಾಜ್ಯಾದ್ಯಂತ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್  ನಟನೆಯ ‘ಹೆಡ್ ಬುಷ್’  ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಕಲಾವಿದರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಸಾಹಸ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದೆಯಲಾಗಿದೆ. ಅದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅಪಮಾನ ಎಂದು ಕಲಾವಿದರು ಆಕ್ಷೇಪಿಸಿದ್ದಾರೆ.

ವೀರಗಾಸೆ  ಕಲೆಗೆ ಮತ್ತು ಅದಕ್ಕೆ ಸಂಬಂಧಿಸಿದ ವೀರಭದ್ರ ದೇವರಿಗೆ ಅವಮಾನ ಮಾಡಿದ ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಪಕರು ಕೂಡಲೇ ಕ್ಷಮೆ ಕೇಳಬೇಕು ಹಾಗೂ ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡಬೇಕು ಎಂಬ ಆಗ್ರಹ ಕೂಡ ಕೇಳಿ ಬರುತ್ತಿದೆ. ಈ ಕುರಿತು ನಟ ಧನಂಜಯ್ ಪ್ರತಿಕ್ರಿಯೆ ನೀಡಿದ್ದಾರೆ. ತಾನೂ ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಕರಾವಳಿಯ ಕೆಲವು ಕಡೆಗಳಲ್ಲಿ ಕೆಂಗಣ್ಣುಕಾಯಿಲೆ ಸಮಸ್ಯೆ.. ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ – Vishwanews24

ಧನಂಜಯ್ ಈವರೆಗೂ ಯಾವುದೇ ವಿವಾದಕ್ಕೆ ಒಳಗಾದವರು ಅಲ್ಲ. ಅದರಲ್ಲೂ ಶರಣ ಪರಂಪರೆಯನ್ನು ಓದಿಕೊಂಡು ಬೆಳೆದವರು. ಕಲೆ ಮತ್ತು ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಈ ಕಾರಣದಿಂದಾಗಿಯೇ ಇಂದು ವೀರಗಾಸೆ ಕಲಾವಿದರನ್ನು ಧನಂಜಯ್ ಭೇಟಿ ಮಾಡುತ್ತಿದ್ದಾರೆ. ಅವರೊಂದಿಗೆ ಆ ದೃಶ್ಯದ ಕುರಿತು ವಿವರಣೆಯನ್ನು ಕೊಡಲಿದ್ದಾರೆ. ಆ ದೃಶ್ಯ ಹಾಗೂ ಅದನ್ನು ಸಿನಿಮಾದಲ್ಲಿ ಯಾಕೆ ಆ ರೀತಿ ಅಳವಡಿಸಲಾಗಿದೆ ಎನ್ನುವ ಕುರಿತು ಚರ್ಚಿಸಲಿದ್ದಾರೆ.

ಇದನ್ನೂ ಓದಿ : ಲಾಲಾಜಿಗೆ ಊರಿನ ಅಭಿವೃದ್ಧಿಯ ಕಾಳಜಿಗಿಂತ ತನ್ನ ಬಂಡವಾಳ ಗಟ್ಟಿ ಮಾಡಿಕೊಳ್ಳುವುದೇ ಟೆಂಕ್ಷನ್..

ಇಂದು ವೀರಗಾಸೆ ಕಲಾವಿದರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುತ್ತಿದ್ದೇನೆ. ಕಲಾವಿದರೊಂದಿಗೆ ಚರ್ಚೆ ಮಾಡಿ, ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇನೆ. ನನಗೂ ವೀರಭದ್ರ ದೇವರ ಮೇಲೆ ಅಪಾರ ಭಕ್ತಿ. ವೀರಗಾಸೆ ಕಲೆಯನ್ನು ತುಂಬಾ ಇಷ್ಟ ಪಡುವವನು. ಹಾಗಾಗಿ ನನ್ನಿಂದ ಯಾವುದೇ ಅವಮಾನ ಆಗುವಂತಹ ಕೆಲಸ ಆಗಲ್ಲ ಎಂದಿದ್ದಾರೆ ಧನಂಜಯ್.

Leave a Reply