ಹೆಬ್ರಿ: ಕಾರು ಢಿಕ್ಕಿ ; ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು – vishwanews24

Featured, ಉಡುಪಿ

ಹೆಬ್ರಿ: ಕಾರು ಢಿಕ್ಕಿ ; ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವು

ಹೆಬ್ರಿ: ಬೈಕೊಂದಕ್ಕೆ ಎದುರುಗಡೆಯಿಂದ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಶಿವಪುರ ಗ್ರಾಮದ ರಾಂಪುರ ಎನ್ನುವಲ್ಲಿ ಜ. 4ರ ರಾತ್ರಿ ಸುಮಾರು 11.30ರ ಹೊತ್ತಿಗೆ ಸಂಭವಿಸಿದೆ.

ಶಿವಪುರ ಮೂರ್ಸಾಲು ನಿವಾಸಿ ರಾಹುಲ್ (25) ಮೃತ ದುರ್ದೈವಿ.

ಹೆಬ್ರಿ ಕಡೆ ಬರುತ್ತಿದ್ದ ರಾಹುಲ್ ಚಲಾಯಿಸುತ್ತಿದ್ದ ಬೈಕ್‌ಗೆ ಎದುರುಗಡೆಯಿಂದ ಬಂದ ಸ್ವಿಪ್ಟ್ ಕಾರಿನ ಚಾಲಕ ಅರುಣ್ ಅತೀ ವೇಗವಾಗಿ ಮತ್ತು ಅಜಾರೂಕತೆಯಿಂದ ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.

ರಾಹುಲ್ ಅವರನ್ನು ಸುರೇಶ ಅವರು ಹೆಬ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿಯಾಗಲಿಲ್ಲ. ಜ. 4ರ ರಾತ್ರಿ ಮುಳ್ಳುಗುಡ್ಡೆ ಶಾಲೆಯಲ್ಲಿ ನಡೆದ ನಾಟಕವನ್ನು ನೋಡಿ ಮನೆಗೆ ಹೋಗುತ್ತಿದ್ದ ಸಂದರ್ಭ ಅಪಘಾತ ನಡೆದಿದೆ.

Leave a Reply