ಹೈಕಮಾಂಡ್ ಚರ್ಚಿಸಿ ಎಲ್ಲವನ್ನ ಸೆಟಲ್ ಮಾಡುತ್ತೆ : ಮಲ್ಲಿಕಾರ್ಜುನ ಖರ್ಗೆ – vishwanews24

Featured, ರಾಜ್ಯ ನ್ಯೂಸ್

ಹೈಕಮಾಂಡ್ ಚರ್ಚಿಸಿ ಎಲ್ಲವನ್ನ ಸೆಟಲ್ ಮಾಡುತ್ತೆ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ದೆಹಲಿಗೆ ಹೋದ ಬಳಿಕ ಮೂರ್ನಾಲ್ಕು ಇಂಪಾರ್ಟೆಂಟ್‌ ಜನರನ್ನ ಕರೆಸಿ ಮಾತನಾಡ್ತೀನಿ. ಹೈಕಮಾಂಡ್‌ ಎಲ್ಲವನ್ನ ಸೆಟಲ್‌ ಮಾಡುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ತಿಳಿಸಿದರು.

ಇಂದು ದೆಹಲಿಯ ಇಂದಿರಾ ಕಾಂಗ್ರೆಸ್‌ ಭವನದಲ್ಲಿ ಹೈಕಮಾಂಡ್‌ ಸಭೆ ನಿಗದಿಯಾಗಿರುವ ಹಿನ್ನೆಲೆ ಬೆಂಗಳೂರಿನಿಂದ ಅವರು ದೆಹಲಿಗೆ ತೆರಳಿದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ, ಮೂರ್ನಾಲ್ಕು ಜನರನ್ನ ಕರೆಸಿ ಮಾತಾಡ್ತೀನಿ. ಮುಂದೆ ಹೇಗೆ ನಡೆಯಬೇಕು ಅಂತ ತೀರ್ಮಾನ ಮಾಡ್ತೀನಿ. ಸಿಎಂ-ಡಿಸಿಎಂ ಎಲ್ಲರನ್ನೂ ಕರೆಸಿ ಸೆಟಲ್‌ ಮಾಡ್ತೀವಿ ಎಂದು ಹೇಳಿದರು.

ಮಂಗಳೂರು : ಅತಿವೇಗ, ನಿರ್ಲಕ್ಷ್ಯದ ಚಾಲನೆ ; ಸಿಟಿ ಬಸ್ ವಶಕ್ಕೆ ಪಡೆದ ಪೊಲೀಸರು – vishwanews24

ನಾನು ಎಲ್ಲರನ್ನೂ ಕರೆಸಿ ಚರ್ಚೆ ಮಾಡ್ತೇನೆ. ರಾಹುಲ್ ಗಾಂಧಿ ಕೂಡ ಸಭೆಯಲ್ಲಿ ಇರ್ತಾರೆ. ಸಿಎಂ ಡಿಸಿಎಂ ಇಬ್ಬರೂ ಇರ್ತಾರೆ. ಹೈಕಮಾಂಡ್ ಅಂದರೆ ಟೀಮ್ ಏಕಾಂಗಿ ಅಲ್ಲ. ಹೈಕಮಾಂಡ್ ಟೀಮ್ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳತ್ತೆ ಎಂದು ಸ್ಪಷ್ಟಪಡಿಸಿದರು.

Leave a Reply