ಹೊಟ್ಟೆ ಪಾಡಿಗಾಗಿ ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ‘ರಾನು ಮಂಡಲ್ ‘ಇದೀಗ ಬಾಲಿವುಡ್ ಸಿಂಗರ್ -Vishwanews24
ಮುಂಬೈ: ಹೊಟ್ಟೆ ಪಾಡಿಗಾಗಿ ಕೋಲ್ಕತ ರೈಲು ನಿಲ್ದಾಣದಲ್ಲಿ ಹಾಡು ಹೇಳಿ ಬದುಕುತ್ತಿದ್ದ‘ರಾನು ಮಂಡಲ್ ಇದೀಗ ಇಂಟರ್‌ನೆಟ್ ಸೆನ್ಸೇಷನಲ್ ಸ್ಟಾರ್ ಆಗಿ ಬದಲಾಗಿದ್ದಾರೆ.
ರಾನು ಇದೀಗ ರಿಯಾಲಿಟಿ ಶೋ ಸೂಪರ್‌ಸ್ಟಾರ್ ಸಿಂಗರ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವುದರೊಂದಿಗೆ ತನ್ನ ಮೊದಲ ಹಾಡನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಈಕೆಯ ಗಾನಕ್ಕೆ ಮನಸೋತ ಸಂಗೀತ ನಿರ್ದೇಶಕ ಮತ್ತು ಗಾಯಕ ಹಿಮೇಶ್ ರೇಶಮಿಯಾ ಅವರ ಮುಂಬರುವ ಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್‌ನಲ್ಲಿ ಒಂದು ಹಾಡನ್ನು ಹಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಜಾಹಿರಾತು
ರಾನು ಮೊಂಡಲ್ ಅವರ ಈ ಪ್ರತಿಭೆಯನ್ನು ಗಮನಿಸಿದ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. ಈ ಬಗ್ಗೆ ಸ್ವತಃ ಹಿಮೇಶ್ ರೇಶ್ಮಿಯಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದು, ಪ್ರತಿಭೆಗೆ ಉತ್ತಮ ವೇದಿಕೆ ಕಲ್ಪಸಿ ಕೊಟ್ಟಿದ್ದಾರೆ.
ಈ ವಿಡಿಯೋದಲ್ಲಿ ರಾನು ಮೊಂಡಲ್ ಅವರು ಹಾಡು ರೆಕಾರ್ಡ್ ಮಾಡುತ್ತಿದ್ದಾಗ ಹಿಮೇಶ್ ಪಕ್ಕದಲ್ಲಿ ನಿಂತು ಆಕೆಗೆ ಸಹಾಯ ಮಾಡಿದ್ದು, ಈ ವಿಡಿಯೋ ನೋಡಿ ಸಾಮಾಜಿಕ ಜಾಲಾತಾಣಿಗರು ಹಿಮೇಶ್ ಅವರ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಹಿಮೇಶ್ ಅವರ ಮುಂಬರುವ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲೂ ಹಾಡು ಹಾಡಲು ಅವಕಾಶ ನೀಡಿದ್ದು, ಇದರಲ್ಲಿ ರಾನು ಮೊಂಡೆಲೋ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಲಿದ್ದಾರೆ.
Weeks back, I tweeted hoping that there would be a future for the gifted #RanuMondal, spotted on a train platform in #Bengal.#HimeshReshammiya gives her a new fairy tale life by getting her to sing in his upcoming movie.
What a moment it would be, if @mangeshkarlata met her!❤ pic.twitter.com/F2imC5RZva
— TANUJJ GARG (@tanuj_garg) August 23, 2019
