ಹೊರರಾಜ್ಯದಿಂದ ಯುವತಿಯರನ್ನ ಕರೆಸಿ ಬೆಂಗಳೂರಿನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ; ಆರೋಪಿ ಬಂಧನ – vishwanews24

Featured, ರಾಜ್ಯ ನ್ಯೂಸ್

ಹೊರರಾಜ್ಯದಿಂದ ಯುವತಿಯರನ್ನ ಕರೆಸಿ ಬೆಂಗಳೂರಿನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ; ಆರೋಪಿ ಬಂಧನ

ಬೆಂಗಳೂರು: ಹೊರರಾಜ್ಯದಿಂದ ಯುವತಿಯರನ್ನ ಕರೆಸಿ ಬೆಂಗಳೂರಿನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನ ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು  ಬಂಧಿಸಿದ್ದಾರೆ.

ಅನಿಲ್‌ ಕುಮಾರ್‌ ರೆಡ್ಡಿ ಬಂಧಿತ ಆರೋಪಿ. ಈತ ಸ್ಪಾಗಳಲ್ಲಿ ದಂಧೆ ನಡೆಸುತ್ತಿದ್ದ, ಹೊರರಾಜ್ಯಗಳಿಂದ ಯುವತಿಯರನ್ನ ಕರೆಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಸದ್ಯ ಆರೋಪಿ ವಿರುದ್ಧ ಮಾನವ ಕಳ್ಳಸಾಗಣೆ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ. ಗೂಂಡಾಕಾಯ್ದೆ ಅಡಿ ಬಂಧಿಸಿದ್ದು, ಬಳ್ಳಾರಿ ಜೈಲಿಗಟ್ಟುವಂತೆ ಪೊಲೀಸ್‌ ಆಯುಕ್ತರು ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಂದಾಪುರ: ಗಾಳಿ ತುಂಬುವ ಸಂದರ್ಭ ಟೈಯರ್ ಸ್ಪೋಟ ; ಯುವಕ ಗಂಭೀರ ಗಾಯ – vishwanews24

 

ಕಳೆದ ಜನವರಿಯಲ್ಲೇ ಕೆ.ಆರ್‌ ಪುರದ ಟಿನ್‌ ಫ್ಯಾಕ್ಟರಿ ಬಳಿಯಿದ್ದ ನಿರ್ವಣ ಇಂಟರ್‌ನ್ಯಾಷನಲ್‌ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಥೈಲ್ಯಾಂಡ್‌ ಮಹಿಳೆಯರು ಸೇರಿದಂತೆ 44 ಮಹಿಳೆಯರನ್ನ ರಕ್ಷಣೆ ಮಾಡಲಾಗಿತ್ತು. ದಾಳಿ ಬಳಿಕ ಸ್ಪಾ ಅನ್ನು ಬಂದ್‌ ಮಾಡಲಾಗಿತ್ತು.

ಇನ್ನೂ ಆರೋಪಿಯು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಯುವತಿಯರನ್ನ ಕರೆಸುತ್ತಿದ್ದ. ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕರೆಸಿ ಬಂದು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಅನಿಲ್‌ ರೆಡ್ಡಿ ವಿರುದ್ಧ ರೇಪ್‌ ಸೇರಿ ಇತರೇ ಪ್ರಕರಣಗಳು ದಾಖಲಾಗಿದ್ದರಿಂದ, ಮಹದೇವಪುರ ಪೊಲೀಸರು ಗೂಂಡಾ ಕಾಯ್ದೆ ರಿಪೋರ್ಟ್ ತಯಾರಿಸಿದ್ದರು. ವರದಿ ಆಧರಿಸಿ ಪೊಲೀಸ್‌ ಆಯುಕ್ತರು ಅನಿಲ್ ರೆಡ್ಡಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ ಎಂದು ಪೊಲೀಸರು ಕಂಪ್ಲೀಟ್‌ ಮಾಹಿತಿ ನೀಡಿದ್ದಾರೆ.

ಉಡುಪಿ: ಪಡೆದ ಸಾಲವನ್ನು ಮರುಪಾವತಿಸದೆ, ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು – vishwanews24

Leave a Reply