ಹೊಸ ವರ್ಷಾಚರಣೆ ದಿನ ಎಲ್ಲಾ ಕಡೆ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ : ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ – Vishwanews24

Featured, ರಾಜ್ಯ ನ್ಯೂಸ್

ಹೊಸ ವರ್ಷಾಚರಣೆ ದಿನ ಎಲ್ಲಾ ಕಡೆ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ ..

ಡಿ.31ರ ರಾತ್ರಿ 9 ಗಂಟೆ ಬಳಿಕ ಬೆಂಗಳೂರಿನ 30 ಫ್ಲೈ ಓವರ್ ಬಂದ್..

ಏರ್ ಪೋರ್ಟ್ ಪ್ರೈಓವರ್ ಮೇಲೆ ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ ..

ನೈಸ್ ರಸ್ತೆಯಲ್ಲೂ ರಾತ್ರಿ 9 ಗಂಟೆ ಬಳಿಕ ಬೈಕ್‌ಗಳ ಸಂಚಾರ ಬಂದ್..

ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ

ಬೆಂಗಳೂರು: ಇನ್ನೇನು ಹೊಸ ವರ್ಷಕ್ಕೆ ಕ್ಷಣಗಣ ಶುರುವಾಗಿದೆ. ಎರಡು ವರ್ಷಗಳ ಬಳಿಕ ಈ ಬಾರಿ ಹೊಸ ವರ್ಷಾಚರಣೆಗೆ ಅದ್ಧೂರಿ ಸಿದ್ಧತೆ ಮಾಡಲಾಗಿದೆ.

ಈಗಾಗಲೇ ಖಾಕಿ ಫುಲ್‌ ಅಲರ್ಟ್‌ ಆಗಿದೆ. ಹೊಸ ವರ್ಷಾಷಚರಣೆ ದಿನ ಎಲ್ಲಾ ಕಡೆ ಡ್ರಂಕ್‌ ಅಂಡ್‌ ಡ್ರೈವ್‌ ತಪಾಸಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ಹೇಳಿದ್ದಾರೆ.

ಕೇಸರಿಮಯವಾದ ಮಂಡ್ಯ; ಬಿಜೆಪಿ ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದೆ ಸುಮಲತಾ ಫೋಟೋ – Vishwanews24

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಂಗ್ ಆಯಂಡ್ ಡ್ರೈವ್ ನಿಯಂತ್ರಣಕ್ಕಾಗಿ ಡಿಸೆಂಬರ್ 31ರ ರಾತ್ರಿ 9 ಗಂಟೆಗೆ ನಗರದ 30 ಪ್ರೈಓವರ್‌ಗಳು ಬಂದ್ ಆಗಲಿದೆ. ಏರ್ ಪೋರ್ಟ್ ಪ್ರೈಓವರ್ ಮೇಲೆ ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ ನೈಸ್ ರಸ್ತೆಯಲ್ಲೂ ರಾತ್ರಿ 9 ಗಂಟೆ ಬಳಿಕ ಬೈಕ್‌ಗಳ ಸಂಚಾರ ಬಂದ್ ಹೊಸ ವರ್ಷದಿನ ಮೆಟ್ರೋ, ಬಿಎಂಟಿಸಿ ಸಂಚಾರ ಇರಲಿದೆ. ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಕೋರಮಂಗಲ ಸೇರಿದಂತೆ ಜನರ ಸೇರುವ ಕಡೆ ಹೆಚ್ಚಿನಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ತಿಳಿಸಿದ್ದಾರೆ.

 

Leave a Reply