ಹೊಸ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿಲ್ಲ: ರಾಜ್ಯ ಆಹಾರ ಇಲಾಖೆ ಸ್ಪಷ್ಟನೆ – vishwanews24 https://wp.me/p9KQap-oK6

Featured, ರಾಜ್ಯ ನ್ಯೂಸ್

ಚಿಕಿತ್ಸೆಗಳಿಗೆ ಅಗತ್ಯವಿರುವವರಿಗೆ ಮಾತ್ರ ಬಿಪಿಎಲ್ ಕಾರ್ಡುಗಳಿಗಾಗಿ ಅರ್ಜಿ ಆಹ್ವಾನ..

 ಬಿಪಿಎಲ್, ಎಪಿಎಲ್ ಕಾರ್ಡುಗಳ ಹೆಸರು, ವಿಳಾಸ ಪರಿಷ್ಕರಣೆಗೆ ಅರ್ಜಿ ಸಲ್ಲಿಸಲು ಸಹ ಅವಕಾಶ..

ವದಂತಿ ನಂಬಬೇಡಿ ಎಂದ ರಾಜ್ಯ ಆಹಾರ ಇಲಾಖೆ..

ಬೆಂಗಳೂರು: ರಾಜ್ಯದ ನೂರಾರು ಜನರು BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ ಅಂತ ನಾಮುಂದು, ತಾಮುಂದು ಅಂತ ಸೇವಾ ಕೇಂದ್ರಗಳಲ್ಲಿ ಮುಗಿ ಬಿದ್ದಿದ್ದರು. ಆದ್ರೇ ಇವರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ಹೊಸದಾಗಿ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿಲ್ಲ ರಾಜ್ಯ ಆಹಾರ ಇಲಾಖೆ ಸ್ಪಷ್ಟ ಪಡಿಸಿದೆ.

ಸರ್ಕಾರದ ದಲಿತ ವಿರೋಧಿ ನೀತಿ  ಖಂಡಿಸಿ ಜು. 15ರಂದು ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ ಚಲೋಗೆ ಕರೆ  : ಸುನಿಲ್ ಕುಮಾರ್ – vishwanews24

ವಿವಿಧ ಮಾಧ್ಯಮಗಳಲ್ಲಿ ಒಂದು ವರ್ಷದ ಬಳಿಕ ಆಹಾರ ಇಲಾಖೆಯಿಂದ ಹೊಸದಾಗಿ ಬಿಪಿಎಲ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಒಪ್ಪಿಗೆ ನೀಡಿದೆ. ಇಂದಿನಿಂದಲೇ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭಗೊಳ್ಳುತ್ತಿದೆ ಅನ್ನೋ ಸುದ್ದಿಗಳು ವೈರಲ್ ಆಗಿದ್ದವು.

ಈ ಬಗ್ಗೆ ಆಹಾರ ಇಲಾಖೆಯಿಂದ ಸ್ಪಷ್ಟನೆಯ ಮಾಹಿತಿ ಬಿಡುಗಡೆ ಮಾಡಿದ್ದು, ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಅರ್ಜಿ ಸಲ್ಲಿಕೆಯೂ ಆರಂಭಗೊಂಡಿಲ್ಲ ಅಂತ ಸ್ಪಷ್ಟ ಪಡಿಸಿದೆ.

ಪತ್ನಿಯ ವ್ಯಾಸಂಗಕ್ಕೆ ಸಹಾಯ ಮಾಡಿದ ಗಂಡ ; ಸರ್ಕಾರಿ ಕೆಲಸ ಸಿಕ್ಕಿದ ಮೇಲೆ ಪತ್ನಿ ಎಸ್ಕೇಪ್ – vishwanews24

ಇನ್ನೂ ಇಂದಿನಿಂದ ಕೇವಲ ಬಡ ರೋಗಿಗಳು ಚಿಕಿತ್ಸೆ ಪಡೆಯೋದಕ್ಕಾಗಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಚಿಕಿತ್ಸೆಗಾಗಿ ಬಿಪಿಎಲ್ ಕಾರ್ಡ್ ಬಯಸುವಂತವರು ಇಂದಿನಿಂದ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಅಂತ ತಿಳಿಸಿದೆ.

ವದಂತಿ ನಂಬಬೇಡಿ ಎಂದ ಇಲಾಖೆ

ಹೊಸದಾಗಿ ಬಿಪಿಎಲ್ ನಂಬಿದ ಅನೇಕ ಜನರು, ಬೆಂಗಳೂರಿನಲ್ಲಿ ಬೆಂಗಳೂರು ಒನ್ ಸೇರಿದಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಮತ್ಯಾವುದೇ ಆನ್ ಲೈನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ದಾಂಗುಡಿಯಿಟ್ಟಿದ್ದರು. ಆದರೆ, ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ವೆಬ್ ಸೈಟ್ ನಲ್ಲಿ ಅವಕಾಶ ಇಲ್ಲದೇ ಇರುವುದನ್ನು ಗಮನಿಸಿ ನಿರಾಶರಾಗಿದ್ದರು. ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಆ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಈ ಸ್ಪಷ್ಟನೆ ನೀಡಿದೆ.

Leave a Reply