02-04-2022 : ಇಂದಿನ ದಿನ ಭವಿಷ್ಯ -Vishwanews24
02-04-2022 : ಇಂದಿನ ದಿನ ಭವಿಷ್ಯ -Vishwanews24
ಮೇಷ: ಸಾಂಸಾರಿಕ ಜೀವನದಲ್ಲಿ ಖರ್ಚು ವೆಚ್ಚಗಳು ಹೆಚ್ಚಾಗಲಿದೆ. ಕಚೇರಿ ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ವೃಷಭ: ಆರೋಗ್ಯ ಕೈಕೊಡೋದ್ರಿಂದ ಕಿರಿಕಿರಿ ಅನುಭವಿಸಲಿದ್ದೀರಿ.ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ.
ಮಿಥುನ: ಕೆಲಸಕ್ಕೆ ತೆರಳುವ ಮುನ್ನ ಎಲ್ಲಾ ದಾಖಲೆಗಳನ್ನು ತಯಾರು ಮಾಡಿಟ್ಟುಕೊಳ್ಳಿ. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದೀರಿ.
ಕಟಕ : ಮನೆಯ ಕಿರಿಯ ಸದಸ್ಯರು ಶುಭವಾರ್ತೆಯನ್ನು ಹೊತ್ತು ತರಲಿದ್ದಾರೆ. ವೈವಾಹಿಕ ಸಂಬಂಧಕ್ಕಾಗಿ ಹುಡುಕಾಡುತ್ತಿರುವವರಿಗೆ ಕಂಕಣ ಭಾಗ್ಯವಿದೆ.
ಸಿಂಹ : ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ ಉಂಟಾಗಲಿದೆ. ಲೌಕಿಕ ಜೀವನದಿಂದ ಆಧ್ಯಾತ್ಮದ ಕಡೆಗೆ ಒಲವು ತೋರಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ.
ಕನ್ಯಾ: ವೃತ್ತಿರಂಗದಲ್ಲಿ ದೊಡ್ಡ ಬದಲಾವಣೆಯ ಪರ್ವಕ್ಕೆ ನೀವು ಸಾಕ್ಷಿಯಾಗುತ್ತೀರಿ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ.
ತುಲಾ: ನಿರುದ್ಯೋಗಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಲ್ಲಿ ಒಳ್ಳೆಯದು. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ದಾಯಾದಿಯ ಜೊತೆಗೆ ಕಲಹ ಮುಂದುವರಿಯಲಿದೆ.
ವೃಶ್ಚಿಕ : ಕಚೇರಿ ಕೆಲಸದಲ್ಲಿ ಶ್ರದ್ಧೆಯೊಂದಿದ್ದರೆ ಸಾಲದು ತಾಳ್ಮೆ ಕೂಡ ಬೇಕು ಅನ್ನೋದು ತಲೆಯಲ್ಲಿರಲಿ. ಯಾರೊಂದಿಗೂ ಮನಸ್ತಾಪ ಬೇಡ.
ಧನು: ನೀವು ಮಾಡದ ತಪ್ಪಿಗೆ ಅಪವಾದಗಳನ್ನು ಎದುರಿಸಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ಸ್ಥಗಿತವಾಗೋದ್ರಿಂದ ಅಸಮಾಧಾನ ನೆಲಸಲಿದೆ.
ಮಕರ: ದಾಂಪತ್ಯದಲ್ಲಿ ಇರಿಸು ಮುರಿಸು ಉಂಟಾಗೋದ್ರಿಂದ ನಿಮ್ಮ ನೆಮ್ಮದಿ ಹಾಳಾಗಲಿದೆ. ಮಾನಸಿಕ ಒತ್ತಡ ಹೆಚ್ಚೋದ್ರಿಂದ ಕಚೇರಿ ಕೆಲಸದ ಕಡೆಗೂ ಏಕಾಗ್ರತೆ ಬಾರದು.
ಕುಂಭ: ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ. ಸಾರ್ವಜನಿಕ ಜೀವನದಲ್ಲಿ ರಾಜಕೀಯ ರಂಗದವರಿಗೆ ಉತ್ತಮ ಪ್ರಶಂಸೆ ಕೇಳಿಬರಲಿದೆ.
ಮೀನ: ಕಚೇರಿ ಕೆಲಸದ ಕಡೆಗೆ ಇನ್ನಷ್ಟು ಗಮನ ನೀಡಲೇಬೇಕು. ಮೇಲಾಧಿಕಾರಿಗಳು ನಿಮ್ಮನ್ನು ಗುರುತಿಸುವಂತ ಸಾಧನೆ ಮಾಡಿ ತೋರಿಸಿ.
