ಬಿಗ್‌ಬಾಸ್‌ಗೆ ರಿಲೀಫ್‌;  ಮನವಿಗೆ ಸ್ಪಂದಿಸಿದ ಡಿಸಿಎಂಗೆ ಕಿಚ್ಚ ಸುದೀಪ್‌ ಧನ್ಯವಾದ – vishwanews24

Featured, ರಾಜ್ಯ ನ್ಯೂಸ್

ಬಿಗ್‌ಬಾಸ್‌ಗೆ ರಿಲೀಫ್‌;  ಮನವಿಗೆ ಸ್ಪಂದಿಸಿದ ಡಿಸಿಎಂಗೆ ಕಿಚ್ಚ ಸುದೀಪ್‌ ಧನ್ಯವಾದ

ಜಾಲಿವುಡ್‌ ಸ್ಟುಡಿಯೋಸ್‌ ಓಪನ್‌ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೂಚನೆ ನೀಡಿದ್ದು, ಬಿಗ್‌ಬಾಸ್‌ಗೆ ರಿಲೀಫ್‌ ಸಿಕ್ಕಿದೆ. ಮನವಿಗೆ ಸ್ಪಂದಿಸಿದ ಡಿಸಿಎಂಗೆ ಕಿಚ್ಚ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ.

ಸುದೀಪ್‌ ಎಕ್ಸ್‌ ಪೋಸ್ಟ್‌ನಲ್ಲೇನಿದೆ?

ಸಕಾಲಿಕ ಸ್ಪಂದನೆಗಾಗಿ ಡಿ.ಕೆ.ಶಿವಕುಮಾರ್ ಸರ್‌ಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್‌ಬಾಸ್‌ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ನಲಪಾಡ್‌ ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು. ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಇಲ್ಲಿಯೇ ಇರುತ್ತದೆ ಎಂದು ಸುದೀಪ್‌ ಸಂದೇಶ ಹಂಚಿಕೊಂಡಿದ್ದಾರೆ.

Leave a Reply