ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ : ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ನ್ಯಾಯಾಲಯಕ್ಕೆ ಶರಣು – vishwanews24

Featured, ದಕ್ಷಿಣ ಕನ್ನಡ

ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ : ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ನ್ಯಾಯಾಲಯಕ್ಕೆ ಶರಣು

ಮಂಗಳೂರು : ಎಸ್​​​​ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಿಂದೂ ಸಂಘಟನೆ ಮುಖಂಡ ಭರತ್​ ಕುಮ್ಡೇಲು  ಶುಕ್ರವಾರ ಮಂಗಳೂರು ನ್ಯಾಯಾಲಯಕ್ಕೆ ಸರೆಂಡರ್  ಆಗಿದ್ದಾರೆ. 3-4 ತಿಂಗಳು ವಿಚಾರಣೆಗೆ ಹಾಜರಾಗದೆ ಭರತ್​ ಕುಮ್ಡೇಲು ತಪ್ಪಿಸಿಕೊಂಡಿದ್ದರು.

ಎಸ್​​​​ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಇತ್ತೀಚೆಗೆ ನಡೆದ ಅಬ್ದುಲ್ ರಹಿಮಾನ್ ಕೊಲೆ ಎರಡು ಪ್ರಕರಣದಲ್ಲಿ ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದಾರೆ. ಅಬ್ದುಲ್ ರಹಿಮಾನ್ ಕೊಲೆ ಕೇಸ್​ನಲ್ಲಿ ಭರತ್ ಕುಮ್ಡೇಲು ತಲೆಮರೆಸಿಕೊಂಡಿದ್ದರು.

ಕಳೆದ 3-4 ತಿಂಗಳು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್​ಗೆ ಹಾಜರಾಗದ ಕಾರಣ ವಾರಂಟ್ ಜಾರಿಯಾಗಿತ್ತು. ಜೊತೆಗೆ ಕೆಲ ದಿನಗಳ ಹಿಂದಷ್ಟೇ ಭರತ್ ಕುಮ್ಡೇಲು ಸೇರಿದಂತೆ ಕೆಲ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕೇಸ್​ ದಾಖಲಿಸಲಾಗಿತ್ತು. ವಾರಂಟ್ ಮತ್ತು ಕೋಕಾ ಕೇಸ್​​ ಹಿನ್ನೆಲೆ ಸದ್ಯ ಭರತ್ ಜಿಲ್ಲಾ ಕೋರ್ಟ್​​ಗೆ ಶರಣಾಗಿದ್ದಾರೆ.

Leave a Reply