ಮಂಗಳೂರು : ಅತಿವೇಗದ ಚಾಲನೆ ; ಪಾದಾಚಾರಿ ಮಹಿಳೆಗೆ ಬಸ್‌ ಢಿಕ್ಕಿ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಅತಿವೇಗದ ಚಾಲನೆ ; ಪಾದಾಚಾರಿ ಮಹಿಳೆಗೆ ಬಸ್‌ ಢಿಕ್ಕಿ

ಮಂಗಳೂರು : ನಗರದ ಬೋಂದೆಲ್‌ ಬಳಿ ಖಾಸಗಿ ಬಸ್‌ ಪಾದಾಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ಧಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಹಿಳೆಯೊಬ್ಬರು ರಸ್ತೆದಾಟುತ್ತಿದ್ದ ವೇಳೆ ಅತಿವೇಗದಲ್ಲಿ ಬಂದಂತಹ ಬಸ್‌, ನಿಯಂತ್ರಣಕ್ಕೆ ಬಾರದೆ ಢಿಕ್ಕಿಹೊಡೆದಿದೆ. ಢಿಕ್ಕಿ ಪರಿಣಾಮ ಬಸ್‌ನ ಗಾಜುಗಳು ಪುಡಿಪುಡಿಯಾಗಿದೆ. ಮಹಿಳೆಯೂ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply