111 ಅಡಿ ಎತ್ತರದ ಶ್ರೀ ಶಿವಕುಮಾರ ಸ್ವಾಮೀಜಿರವರ ಬೃಹತ್ ಪ್ರತಿಮೆ ನಿರ್ಮಾಣ : ಡಿಸಿಎಂ -Vishwanews24
ಬೆಂಗಳೂರು: ಪ್ರಪಂಚದಲ್ಲೇ ಅತಿ ದೊಡ್ಡ ಪ್ರತಿಮೆ ಎಂದು ಖ್ಯಾತವಾಗಿರುವ ಗುಜರಾತಿನ ಏಕತಾ ಪ್ರತಿಮೆಯಂತೆ ರಾಮನಗರದಲ್ಲೂ 25 ಕೋಟಿ ರು ವೆಚ್ಚದಲ್ಲಿ 111 ಅಡಿ ಎತ್ತರದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಜೀ ಹಾಗೂ ಆದಿ ಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ,
ಶಿವಕುಮಾರ ಸ್ವಾಮೀಜಿಗಳ 111 ಅಡಿ ಪ್ರತಿಮೆ ಹಾಗೂ ಆದಿ ಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿಗಳ ಸ್ವಗ್ರಾಮ ಬಾನಂದೂರಿನಲ್ಲಿ ಶ್ರೀಗಳ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ರಾಮನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಘೋಷಿಸಿರುವಂತೆ, ಸಿದ್ಧಗಂಗಾ ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿರವರ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ. ಈ ಪ್ರಯುಕ್ತ ಇಂದು ಸಂಬಂಧಪಟ್ಟ ಅಧಿಕಾರಿಗಳು, ಸಮಿತಿಯೊಂದಿಗೆ ವಿಶೇಷ ಸಭೆ ನಡೆಯಿತು. pic.twitter.com/BCso3rXbOp
— Dr. Ashwathnarayan C. N. (@drashwathcn) October 23, 2019
