ನವದೆಹಲಿ : ಪ್ಯಾಕೇಜ್ ಮಾಡಿದ ಆಹಾರ ಪದಾರ್ಥಗಳಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಗ್ರಾಹಕರು ಸುಲಭವಾಗಿ ಗುರುತಿಸುವಂತಾಗಬೇಕು. ಇದಕ್ಕಾಗಿ ಆಹಾರ ಪೊಟ್ಟಣಗಳ ಮುಂಭಾಗದಲ್ಲೇ ಸ್ಪಷ್ಟವಾದ ಎಚ್ಚರಿಕೆ ಲೇಬಲ್‌ಗಳನ್ನು ಅಳವಡಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೇವಲ ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನಷ್ಟೇ ಪರಿಗಣಿಸದೆ, ಆಹಾರದಲ್ಲಿರುವ ಒಟ್ಟು ಸಕ್ಕರೆ ಹಾಗೂ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣವನ್ನು ಆಧರಿಸಿ ಎಚ್ಚರಿಕೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ಯಾಕೇಜ್ ಆಹಾರಗಳ ಮುಂಭಾಗದ ಪೌಷ್ಟಿಕಾಂಶ ಎಚ್ಚರಿಕೆ ಲೇಬಲ್‌ಗಳ ವ್ಯವಸ್ಥೆಯನ್ನು ರೂಪಿಸುವಾಗ ಈ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ.
ಪ್ರಸ್ತುತ ಆಹಾರ ಪೊಟ್ಟಣಗಳ ಹಿಂಭಾಗದಲ್ಲಿರುವ ಪೌಷ್ಟಿಕಾಂಶದ ಮಾಹಿತಿ ಎಲ್ಲ ಗ್ರಾಹಕರ ಗಮನಕ್ಕೆ ಸುಲಭವಾಗಿ ಬರುವುದಿಲ್ಲ. ಸಣ್ಣ ಅಕ್ಷರಗಳಲ್ಲಿ ನಮೂದಿಸಿರುವ ಮಾಹಿತಿಯನ್ನು ಓದಿ ಅರ್ಥಮಾಡಿಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಹೀಗಾಗಿ ಆಹಾರ ಖರೀದಿಸುವಾಗಲೇ ಅದರಲ್ಲಿರುವ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಪ್ರಮಾಣದ ಬಗ್ಗೆ ಎಚ್ಚರಿಕೆ ಸಿಗುವಂತೆ ಪೊಟ್ಟಣದ ಮುಂಭಾಗದಲ್ಲಿ ಲೇಬಲ್ ಅಳವಡಿಸುವ ವ್ಯವಸ್ಥೆ ಜಾರಿಗೆ ತರಲು ನ್ಯಾಯಾಲಯ ಸೂಚಿಸಿದೆ.
ಎಫ್‌ಎಸ್‌ಎಸ್‌ಎಐ ರೂಪಿಸುವ ಎಚ್ಚರಿಕೆ ಲೇಬಲ್‌ನಲ್ಲಿ ಸಕ್ಕರೆ, ಕೊಬ್ಬು ಮತ್ತು ಉಪ್ಪಿಗೆ ಪ್ರತ್ಯೇಕ ಕೆಂಪು ಚಿಹ್ನೆಗಳನ್ನು ಬಳಸಬೇಕು. ಒಂದೇ ಚಿಹ್ನೆಯಲ್ಲಿ ಎಲ್ಲ ಅಂಶಗಳನ್ನು ಸೇರಿಸುವ ಬದಲು, ಪ್ರತಿಯೊಂದು ಪೌಷ್ಟಿಕಾಂಶಕ್ಕೂ ಪ್ರತ್ಯೇಕ ಎಚ್ಚರಿಕೆ ಇರಬೇಕು. ಪ್ರತಿ ಚಿಹ್ನೆಯಲ್ಲಿ ಸಂಬಂಧಪಟ್ಟ ಪೌಷ್ಟಿಕಾಂಶವನ್ನು ಸೂಚಿಸುವ ಪ್ರಮಾಣಿತ ಚಿತ್ರ ಹಾಗೂ ‘ಹೈ ಫ್ಯಾಟ್’, ‘ಹೈ ಶುಗರ್’, ‘ಹೈ ಸಾಲ್ಟ್’ ಎಂಬ ಪದಗಳನ್ನು ನಮೂದಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ಸುಗಮವಾಗಿ ನಡೆಯುತ್ತದೆ: ಸಚಿವ ಯು.ಟಿ. ಖಾದರ್ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಅಸಮಾಧಾನ…
ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ ತಿರುಮಲ : ಆಂಧ್ರಪ್ರದೇಶದ ಮುಖ್ಯಮಂತ್ರಿ…
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ ಕಾಪು : ಬಿಗ್‌ಬಾಸ್…
ಕುಂದಾಪುರ : ದೇವಸ್ಥಾನದಲ್ಲಿ ಮಹಿಳೆಯ ಕರಿಮಣಿ ಸರ ಕಳವು ಪ್ರಕರಣ ; ನಾಲ್ವರು ಮಹಿಳೆಯರ ಸಹಿತ ಐವರ ಬಂಧನ ಕುಂದಾಪುರ:…
ಸೌಜನ್ಯಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ನಮಗೆ ನ್ಯಾಯ ಕೊಡಿಸಬೇಕು : ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹ ಮಂಗಳೂರು : ಸೌಜನ್ಯಾ ಪ್ರಕರಣದಲ್ಲಿ…
ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ; ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ : ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ ಬೆಂಗಳೂರು:…