Featured

ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ -vishwanews24

ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ

ತಿರುಮಲ :  ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಇಂದು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಚೆನ್ನೈನ ಉದ್ಯಮಿ ವರ್ಧಮಾನ್ ಜೈನ್ ಎಂಬುವವರು 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಇತಿಹಾಸದಲ್ಲೇ ಮೊದಲ ಬಾರಿಗೆ ಭಕ್ತರೊಬ್ಬರು ದೇವರಿಗೆ 40 ವಿವಿಧ ಬಗೆಯ ಚಿನ್ನಾಭರಣಗಳನ್ನು ಸಮರ್ಪಿಸುತ್ತಿದ್ದಾರೆ. ಶುಕ್ರವಾರ ನಡೆಯಲಿರುವ ಅಭಿಷೇಕದ ನಂತರ, ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ನೂತನ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗುವುದು.

9 ಸೆಟ್‌ಗಳಲ್ಲಿ ಜೋಡಿಸಲಾದ 45 ಚಿನ್ನಾಭರಣಗಳನ್ನು ಈ ದೇಣಿಗೆ ಒಳಗೊಂಡಿದ್ದು, ಇದರ ಅಂದಾಜು ಮೌಲ್ಯ 160 ಕೋಟಿ ರೂ. ಎಂದು ಸರ್ಕಾರಿ ಮೂಲವೊಂದು ಪಿಟಿಐಗೆ ತಿಳಿಸಿದೆ.

ಟಿಟಿಡಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಈ ಕಾಣಿಕೆಯ ವಿವರಗಳನ್ನು ಹಂಚಿಕೊಂಡಿದ್ದು, ಚಿನ್ನಾಭರಣಗಳ ತೂಕ 121 ಕೆಜಿ ಇರುವುದನ್ನು ದೃಢಪಡಿಸಿದೆ. ದೇವರನ್ನು ಶಿರದಿಂದ ಪಾದದವರೆಗೆ ಅಲಂಕರಿಸಲು ವಿಶೇಷವಾಗಿ ತಯಾರಿಸಲಾದ ಆಭರಣಗಳಿವು ಎಂದು ದೇವಸ್ಥಾನದ ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಈ ದೇಣಿಗೆಯು ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ನೀಡಲಾದ ಅತಿದೊಡ್ಡ ವೈಯಕ್ತಿಕ ಕಾಣಿಕೆ ಎಂದು ಟಿಟಿಡಿ ಮೂಲಗಳು ಬಣ್ಣಿಸಿವೆ.

ವಿಶೇಷ ತಂಡವೊಂದು ಈ ಚಿನ್ನಾಭರಣಗಳನ್ನು ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದು, ಇವುಗಳ ಅಂದಾಜು ಮೌಲ್ಯ ಸುಮಾರು 160 ಕೋಟಿ ರೂ. ಎಂದು ಹೇಳಲಾಗಿದೆ. ಈ ಆಭರಣಗಳನ್ನು ತಿರುಮಲದ ರಂಗನಾಯಕುಲ ಮಂಟಪದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ವರದಿಗಳ ಪ್ರಕಾರ, ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಳಿ ಈಗಾಗಲೇ ಸುಮಾರು 10 ಟನ್‌ಗಳಷ್ಟು ಚಿನ್ನದ ಸಂಗ್ರಹವಿದೆ.

ಈ ಬೃಹತ್ ಉಡುಗೊರೆಯಲ್ಲಿ ಒಟ್ಟು 47 ಬಗೆಯ ಚಿನ್ನದ ಆಭರಣಗಳಿವೆ. ಇವುಗಳನ್ನು ವಿಶೇಷವಾಗಿ 9 ಸೆಟ್‌ಗಳಾಗಿ ಮಾಡಲಾಗಿದೆ. ಇವುಗಳಲ್ಲಿ ಕಿರೀಟ, ವಡ್ಡನ, ಭುಜದ ಆಭರಣಗಳು, ಶಂಖ ಚಿಪ್ಪುಗಳು ಮತ್ತು ಅಭಯ ಹಸ್ತ ಸೇರಿವೆ. ಇವುಗಳನ್ನು ಆಗಮ ಶಾಸ್ತ್ರ ಮತ್ತು ಟಿಟಿಡಿ ಸಂಪ್ರದಾಯಗಳ ನಿಯಮಗಳಿಗೆ ಅನುಸಾರವಾಗಿ ಸುಂದರವಾಗಿ ರಚಿಸಲಾಗಿದೆ.

ವರ್ಧಮಾನ್ ಜೈನ್ ಕುಟುಂಬವು ಶ್ರೀವರಿಗೆ ಈ ರೀತಿ ದಾನ ನೀಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷ ಮೇ 16 ರಂದು ಅವರು ಟಿಟಿಡಿಗೆ ಎಲೆಕ್ಟ್ರಿಕ್ ಬಸ್ ಅನ್ನು ಸಹ ದಾನ ಮಾಡಿದರು. ಈಗ, ಅವರು 121 ಕೆಜಿ ಚಿನ್ನದ ಆಭರಣಗಳನ್ನು ದಾನ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

Vishwa News 24

Recent Posts

ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಆಹಾರ ಗುರುತಿಸಲು  ಪ್ಯಾಕೇಜ್‌ಗಳ ಮೇಲೆ ಸ್ಪಷ್ಟವಾದ ಎಚ್ಚರಿಕೆ ಲೇಬಲ್ ಕಡ್ಡಾಯ : ಸುಪ್ರೀಂ ಆದೇಶ -vishwanews24

ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಆಹಾರ ಗುರುತಿಸಲು  ಪ್ಯಾಕೇಜ್‌ಗಳ ಮೇಲೆ ಸ್ಪಷ್ಟವಾದ ಎಚ್ಚರಿಕೆ ಲೇಬಲ್ ಕಡ್ಡಾಯ : ಸುಪ್ರೀಂ ಆದೇಶ…

12 minutes ago

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ  -vishwanews24

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ ಕಾಪು : ಬಿಗ್‌ಬಾಸ್…

13 hours ago

ಕುಂದಾಪುರ : ದೇವಸ್ಥಾನದಲ್ಲಿ ಮಹಿಳೆಯ ಕರಿಮಣಿ ಸರ ಕಳವು ಪ್ರಕರಣ ; ನಾಲ್ವರು ಮಹಿಳೆಯರ ಸಹಿತ ಐವರ ಬಂಧನ -vishwanews24

ಕುಂದಾಪುರ : ದೇವಸ್ಥಾನದಲ್ಲಿ ಮಹಿಳೆಯ ಕರಿಮಣಿ ಸರ ಕಳವು ಪ್ರಕರಣ ; ನಾಲ್ವರು ಮಹಿಳೆಯರ ಸಹಿತ ಐವರ ಬಂಧನ ಕುಂದಾಪುರ:…

18 hours ago

ಸೌಜನ್ಯಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ನಮಗೆ ನ್ಯಾಯ ಕೊಡಿಸಬೇಕು : ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹ -vishwanews24

ಸೌಜನ್ಯಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ನಮಗೆ ನ್ಯಾಯ ಕೊಡಿಸಬೇಕು : ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹ ಮಂಗಳೂರು : ಸೌಜನ್ಯಾ ಪ್ರಕರಣದಲ್ಲಿ…

18 hours ago

ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ; ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ : ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ -vishwanews24

ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬಾರದು ; ತಾಳ್ಮೆಯಿಂದ ಹೋರಾಟ ವಾಪಸ್ ತೆಗೆದುಕೊಳ್ಳಿ : ಆಶಾ ಕಾರ್ಯಕರ್ತೆಯರಿಗೆ ಸಿಎಂ ಮನವಿ ಬೆಂಗಳೂರು:…

20 hours ago

ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ : ಡಿ.1ರಿಂದ ದೇಶಾದ್ಯಂತ ಬಿಜೆಪಿಯ ‘ಸೇವಾ ದೂತ’ ಅಭಿಯಾನ -vishwanews24

ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ – ಡಿ.1ರಿಂದ ದೇಶಾದ್ಯಂತ ಬಿಜೆಪಿಯ 'ಸೇವಾ ದೂತ’ ಅಭಿಯಾನ ನವದೆಹಲಿ: ಪ್ರಧಾನಿ ನರೇಂದ್ರ…

20 hours ago