ಉಡುಪಿ : ನೂತನವಾಗಿ ಆರಂಭಗೊಂಡ ಬೆಂಗಳೂರು- ಮಂಗಳೂರು- ಕಾರವಾರ- ಮಡಗಾಂವ್ ವಂದೇ ಭಾರತ್ ರೈಲಿನ ವೇಗವನ್ನು ಸಾಧ್ಯವಿದ್ದೆಡೆ ಹೆಚ್ಚಿಸಿದರೆ ಸುಮಾರು 2 ಗಂಟೆಗಳ ಪ್ರಯಾಣದ ಅವಧಿ ಕಡಿಮೆ ಯಾಗಲಿದೆ. ಆದ್ದರಿಂದ ಘಾಟಿ ಪ್ರದೇಶವನ್ನುಳಿದು ಇತರೆಡೆ ವಿಳಂಬವಾಗುತ್ತಿರುವ ರೈಲ್ವೆ ಸಮಯವನ್ನು ನಿಯಮಾನುಸಾರ ವೇಗಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ದಿ ಸದಸ್ಯರಿಗೆ ಮನವಿ ಸಲ್ಲಿಸಿದರು.
ಈಗ ವಂದೇ ಭಾರತ್ ಪ್ರಯಾಣದ ಒಟ್ಟು ಅವಧಿ 13 ಗಂಟೆಗಳಾಗಿದ್ದು, ವ್ಯರ್ಥ ಸಮಯವನ್ನು ಪ್ರಯಾಣಕ್ಕೆ ಬಳಸಿದರೆ ಬೆಂಗಳೂರು- ಮಡಗಾಂವ್ ರೈಲು 11 ಗಂಟೆಗಳಲ್ಲಿ ಗುರಿ ತಲುಪಲು ಸಾಧ್ಯವಿದೆ ಎಂದು ಅವರು ಕೋಟ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಹೊಸ ವಂದೇ ಭಾರತ್ ಮಧ್ಯಮ ವರ್ಗದ ಪ್ರಯಾಣಿಕರನ್ನು ಆರ್ಕಷಿಸುತ್ತಿದ್ದು, ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರಯಾಣದ ವೇಳೆ ಕಡಿಮೆಯಾದರೆ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ವಾಗಲಿದೆ ಎಂದು ಕೋಟ ಪತ್ರದಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿವಾಸ ಹಾಗೂ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ…
ಆಶಾ ಕಾರ್ಯಕರ್ತೆಯರ ಸೇವೆಯನ್ನು ಆರೋಗ್ಯ ಸಚಿವರು ಅವಮಾನಿಸುತ್ತಿರುವುದು ಖಂಡನೀಯ.. ಆಶಾ ಕಾರ್ಯಕರ್ತರ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ ಸಚಿವ ಖಾದರ್…
ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ಸುಗಮವಾಗಿ ನಡೆಯುತ್ತದೆ: ಸಚಿವ ಯು.ಟಿ. ಖಾದರ್ ಮುಷ್ಕರ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಅಸಮಾಧಾನ…
ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಆಹಾರ ಗುರುತಿಸಲು ಪ್ಯಾಕೇಜ್‌ಗಳ ಮೇಲೆ ಸ್ಪಷ್ಟವಾದ ಎಚ್ಚರಿಕೆ ಲೇಬಲ್ ಕಡ್ಡಾಯ : ಸುಪ್ರೀಂ ಆದೇಶ…
ತಿರುಪತಿ ತಿಮ್ಮಪ್ಪನಿಗೆ 160 ಕೋಟಿ ಮೌಲ್ಯದ 121 ಕೆಜಿ ಚಿನ್ನ ನೀಡಿದ ಚೆನ್ನೈ ಉದ್ಯಮಿ ತಿರುಮಲ : ಆಂಧ್ರಪ್ರದೇಶದ ಮುಖ್ಯಮಂತ್ರಿ…
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಖ್ಯಾತಿಯ ನಟಿ ಅನುಷಾ ರೈ ಕಾಪು : ಬಿಗ್‌ಬಾಸ್…