ಮೇಷ : ಈ ದಿನವು ನಿಮಗೆ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ಗುರು ಅನುಗ್ರಹದಿಂದ ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಉದ್ಯಮದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಮುನ್ನುಗ್ಗಲಿದ್ದೀರಿ.
ವೃಷಭ : ನಿಮ್ಮ ಗುರಿಯಿಂದ ನಿಮ್ಮ ವಿಚಲಿತರನ್ನಾಗಿಸಲು ಕೆಲ ಅಡೆತಡೆಗಳು ಎದುರಾಗಬಹುದು. ಯಾವುದೇ ಕಾರಣಕ್ಕೂ ಮನಸ್ಸನ್ನು ಚಂಚಲ ಮಾಡಿಕೊಳ್ಳಬೇಡಿ.
ಮಿಥುನ : ಕೆಲವೊಂದು ವಿಚಾರಗಳಲ್ಲಿ ನೀವು ದೃಢ ಸಂಕಲ್ಪದಿಂದ ಇರಲೇಬೇಕು. ಸ್ಥಿಮಿತ ಕಳೆದುಕೊಳ್ಳಬೇಡಿ. ಸಂಗಾತಿಯು ಚಿಕ್ಕ ಚಿಕ್ಕ ವಿಷಯಕ್ಕೂ ನಿಮ್ಮ ಮೇಲೆ ರೇಗಲಿದ್ದಾರೆ.
ಕಟಕ : ಉದ್ಯೋಗದ ನಿಮಿತ್ತ ನಿಮಗೆ ವಿದೇಶಿ ಪ್ರಯಾಣದ ಭಾಗ್ಯ ಕೂಡಿ ಬರಲಿದೆ. ಪ್ರಯಾಣ ಕೂಡ ಉತ್ತಮವಾಗಿಯೇ ಇರಲಿದೆ. ಸಂಗಾತಿಯು ನಿಮ್ಮನ್ನು ಎಲ್ಲಾ ಪರಿಸ್ಥಿತಿಯಲ್ಲಿಯೂ ಅರ್ಥ ಮಾಡಿಕೊಳ್ಳುತ್ತಾರೆ.
ಸಿಂಹ : ಯಾವುದೇ ವಿಚಾರದಲ್ಲಿ ಆಗಲಿ ಅತಿಯಾದ ಆತುರ ಸಲ್ಲದು. ತಾಳ್ಮೆಯನ್ನು ಕಾಯ್ದುಕೊಳ್ಳುವುದನ್ನು ಕಲಿತುಕೊಳ್ಳಿ. ಸೌಂದರ್ಯವರ್ಧಕ ಮಾರಾಟಗಾರರಿಗೆ ಇದು ಸುದಿನವಾಗಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.
ಕನ್ಯಾ : ಅನೇಕ ದಿನಗಳ ಬಳಿಕ ಕುಟುಂಬಸ್ಥರ ಜೊತೆಯಲ್ಲಿ ಕಾಲ ಕಳೆಯಲಿದ್ದೀರಿ. ಈ ದಿನ ನಿಮಗೆ ಸಂತಸಮಯವಾಗಿ ಇರಲಿದೆ. ಬಹಳ ದಿನಗಳ ಬಳಿಕ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಹಳೆಯ ಸಾಲಗಳು ತೀರಲಿವೆ.
ತುಲಾ : ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ಆಸ್ಪತ್ರೆಗೆ ಅಲೆದಾಟ ತಪ್ಪಿದ್ದಲ್ಲ. ಉದ್ಯಮದಲ್ಲಿ ಸಫಲರಾಗಲು ಇನ್ನಷ್ಟು ಪ್ರಯತ್ನ ಮುಂದುವರಿಸಿ.
ವೃಶ್ಚಿಕ : ಸಂಗಾತಿ ಹಾಗೂ ನಿಮ್ಮ ನಡುವಿನ ಸಂಬಂಧ ಗಟ್ಟಿಗೊಳ್ಳಲಿದೆ. ನಿಮ್ಮ ಯೋಜನೆಗಳು ಫಲಪ್ರದವಾಗಲು ಹೆಚ್ಚಿನ ಪ್ರಯತ್ನ ಮಾಡಿ. ಪೋಷಕರು ವ್ಯವಹಾರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಸ್ನೇಹಿತರ ನಿಜಬಣ್ಣ ಬಯಲಾಗಲಿದೆ.
ಧನು : ಭೂಮಿ ಖರೀದಿ ಮಾಡುವವರಿಗೆ ಇದು ಸುದಿನವಾಗಿದೆ. ಈ ದಿನ ನಿಮಗೆ ಹೆಚ್ಚಿನ ಅದೃಷ್ಟ ತರಲಿದೆ. ಸಂಬಂಧದ ವಿಚಾರದಲ್ಲಿ ನೀವು ಅನೇಕ ಅಪವಾದ ಎದುರಿಸಬೇಕಾದೀತು.
ಮಕರ : ವೈವಾಹಿಕ ಸಂಬಂಧಗಳಿಗೆ ಅನೇಕ ವರ್ಷಗಳಿಂದ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಯೋಗ್ಯ ಕಂಕಣಬಲ ಕೂಡಿ ಬರಲಿದೆ.
ಕುಂಭ : ಉದ್ಯಮದಲ್ಲಿ ನೀವು ಆದಷ್ಟು ಜಾಗ್ರತೆಯಿಂದ ಇರಬೇಕು. ಇಲ್ಲವಾದಲ್ಲಿ ಬಹುದೊಡ್ಡ ನಷ್ಟ ಅನುಭವಿಸಲಿದ್ದೀರಿ.
ಮೀನ : ದಾಂಪತ್ಯ ಜೀವನ ಅತ್ಯಂತ ಚೆನ್ನಾಗಿ ಇರಲಿದೆ. ವೃತ್ತಿ ರಂಗದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಿದೆ. ಶ್ರೀಕೃಷ್ಣನನ್ನು ಆರಾಧಿಸಿ. ಆರೋಗ್ಯದ ಕಡೆ ಗಮನ ನೀಡಿ.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…
ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳೂರು: ದಸರಾ ಸಂಭ್ರಮದ ನಡುವೆಯೇ…
ಮಂಗಳೂರು : ದಸರಾ ಉದ್ಘಾಟನೆಗೆ ಸಿಎಂ ಗೈರು ; ಕರಾವಳಿ ತೀವ್ರ ಜನರಲ್ಲಿ ಅಸಮಾಧಾನ : ಅಕ್ಷಿತ್ ಸುವರ್ಣ ಮಂಗಳೂರು:…
ಮಂಗಳೂರು: ಅಕ್ರಮ ಸಂಬಂಧದ ಶಂಕೆ ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಮಂಗಳೂರು: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆ…
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…