15 ವರ್ಷದೊಳಗಿನ ಮಕ್ಕಳಿಗೆ ಹೊಸ ಪಾಸ್‌ಪೋರ್ಟ್ ನಿಯಮ ಜಾರಿ – vishwanews24
ಪಾಸ್‌ಪೋರ್ಟ್ ನಿಯಮದಲ್ಲಿ ಬದಲಾವಣೆ : 15 ವರ್ಷದೊಳಗಿನ ಮಕ್ಕಳಿಗೆ ಹೊಸ ನೀತಿ, ಅರ್ಜಿ ಶುಲ್ಕ ಪರಿಷ್ಕರಣೆ
ನವದೆಹಲಿ: ವಿದೇಶಾಂಗ ಸಚಿವಾಲಯವು ಪಾಸ್‌ಪೋರ್ಟ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪಾಸ್‌ಪೋರ್ಟ್ ಸಿಂಧುತ್ವದ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ಮಗುವಿಗೆ 18 ವರ್ಷ ತುಂಬಿದ ತಕ್ಷಣ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದ್ದು, ನೂತನ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದೆ. ಮಕ್ಕಳ ಪಾಸ್‌ಪೋರ್ಟ್ ಪಡೆಯಲು ಬಯಸುವ ಪೋಷಕರಿಗೆ ವಿದೇಶಾಂಗ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಅಪ್ರಾಪ್ತರಿಗೆ ನೀಡುವ 26 ಪುಟಗಳ ಪಾಸ್‌ಪೋರ್ಟ್ ಸಿಂಧುತ್ವವನ್ನು ಗರಿಷ್ಠ 5 ವರ್ಷ ಅಥವಾ 18 ವರ್ಷ ವಯಸ್ಸಿನವರೆಗೆ ನಿಗದಿಪಡಿಸಲಾಗಿದ್ದು, ಅರ್ಜಿ ಶುಲ್ಕವನ್ನೂ ಪರಿಷ್ಕರಿಸಲಾಗಿದೆ.
ಹೊಸ ಸಿಂಧುತ್ವ ನಿಯಮ: 1980 ರ ಪಾಸ್‌ಪೋರ್ಟ್ ನಿಯಮಾವಳಿಯ ರೂಲ್ 12 (1ಎ) ತಿದ್ದುಪಡಿ ಮಾಡಲಾಗಿದೆ. ಉದಾಹರಣೆಗೆ, ಮಕ್ಕಳ 14ನೇ ವಯಸ್ಸಿನಲ್ಲಿ ಪಾಸ್‌ಪೋರ್ಟ್ ನೀಡಿದರೆ, 5 ವರ್ಷದ ಲೆಕ್ಕಾಚಾರದ ಪ್ರಕಾರ ಅದು 19 ವರ್ಷದವರೆಗೆ ಇರಬೇಕಿತ್ತು. ಆದರೆ ಹೊಸ ನಿಯಮದ ಪ್ರಕಾರ ಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣವೇ ಆ ಪಾಸ್‌ಪೋರ್ಟ್ ಅಮಾನ್ಯವಾಗಲಿದ್ದು, ವಯಸ್ಕರ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಉಡುಪಿ: ಹುಲಿ ಕುಣಿತಕ್ಕೆ ಮನಸೋತ ಯತ್ನಾಳ್ ; ಹುಲಿ ವೇಷಧಾರಿಗಳೊಂದಿಗೆ ಭರ್ಜರಿ ಸ್ಟೆಪ್ – vishwanews24
ಹಿಂದಿನ ನಿಯಮವೇನಿತ್ತು?: ಈ ಹಿಂದೆ 15 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿದ್ದ ಪಾಸ್‌ಪೋರ್ಟ್ 5 ವರ್ಷಗಳವರೆಗೆ ಅಥವಾ ಮಗುವಿಗೆ 15 ವರ್ಷ ತುಂಬುವವರೆಗೆ ಮಾತ್ರ ಮಾನ್ಯವಾಗಿರುತ್ತಿತ್ತು. ಈಗ ಆ ಮಿತಿಯನ್ನು 18 ವರ್ಷದವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಶುಲ್ಕ ಪರಿಷ್ಕರಣೆ: ನಿಯಮ 8 (1) ರ ತಿದ್ದುಪಡಿಯಂತೆ, ಎಲ್ಲಾ ವರ್ಗದ ಪಾಸ್‌ಪೋರ್ಟ್ ಅರ್ಜಿಗಳಿಗೆ ನಿಗದಿಪಡಿಸಲಾದ ನವೀಕೃತ ಶುಲ್ಕ ರಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶೆಡ್ಯೂಲ್ IV ದರಗಳನ್ನು ಅನ್ವಯಿಸಲಾಗಿದೆ.
ಪರಿಷ್ಕೃತ ಶುಲ್ಕದ ವಿವರ:
ವಯಸ್ಕರ ಸಾಮಾನ್ಯ ಪಾಸ್‌ಪೋರ್ಟ್ (36 ಪುಟ): 1,500 ರೂ.ನಿಂದ 2,500 ರೂ.ಗೆ ಏರಿಕೆ.
ವಯಸ್ಕರ ಜಂಬೋ ಪಾಸ್‌ಪೋರ್ಟ್ (60ಪುಟ): 2 ಸಾವಿರ ರೂ.ನಿಂದ 2,500 ರೂ.ಗೆ ಏರಿಕೆ.
ತತ್ಕಾಲ್ 36 ಪುಟ: 3,500 ರೂ.ನಿಂದ 5 ಸಾವಿರ ರೂ.ಗೆ ಪರಿಷ್ಕರಣೆ.
ತತ್ಕಾಲ್ 60 ಪುಟ: 4 ಸಾವಿರ ರೂ.ನಿಂದ 6 ಸಾವಿರ ರೂ.ಗೆ ಹೆಚ್ಚಳ
ಫೋಟೋ ಬದಲಾವಣೆ ಮತ್ತು ಬಯೋಮೆಟ್ರಿಕ್ಸ್ ಅಗತ್ಯ: ಮಕ್ಕಳು ಬೆಳೆದಂತೆ ಅವರ ಮುಖಚಹರೆ ಮತ್ತು ದೈಹಿಕ ಲಕ್ಷಣಗಳು ವೇಗವಾಗಿ ಬದಲಾಗುವುದರಿಂದ ಅಂತಾರಾಷ್ಟ್ರೀಯ ವಲಸೆ ನಿಯಮಗಳ (ICAO) ಅಡಿಯಲ್ಲಿ ಗುರುತು ಪತ್ತೆ ಸುಲಭಗೊಳಿಸಲು ಈ 18 ವರ್ಷದ ಸ್ಪಷ್ಟ ಮಿತಿಯನ್ನು ನಿಗದಿಪಡಿಸಲಾಗಿದೆ. ಬಾಲಕ ಅಥವಾ ಬಾಲಕಿಯ ವಯಸ್ಸು 18 ವರ್ಷ ತುಂಬುತ್ತಿದ್ದಂತೆ ವಯಸ್ಕರ ವಿಭಾಗದಲ್ಲಿ ಬಯೋಮೆಟ್ರಿಕ್ ಮತ್ತು ಬೆರಳಚ್ಚು ನೀಡಿ ಹೊಸ ಪಾಸ್‌ಪೋರ್ಟ್ ಪಡೆಯುವುದು ಕಡ್ಡಾಯ.
ಆನ್‌ಲೈನ್ ಸಲ್ಲಿಕೆ ಪ್ರಕ್ರಿಯೆ: ಪೋಷಕರು ‘ಪಾಸ್‌ಪೋರ್ಟ್ ಸೇವಾ’ (Passport Seva) ಪೋರ್ಟಲ್ ಅಥವಾ ‘mPassport Seva’ ಆ್ಯಪ್ ಮೂಲಕ ಈ ಪರಿಷ್ಕೃತ ನಿಯಮಗಳನ್ವಯ ತಮ್ಮ ಅಪ್ರಾಪ್ತ ಮಕ್ಕಳಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜೊತೆಗೆ ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರ ಪಾಸ್‌ಪೋರ್ಟ್ ಪ್ರತಿಗಳನ್ನು ಲಗತ್ತಿಸುವುದು ಅಗತ್ಯವಾಗಿದೆ.
ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ – vishwanews24
ಇ-ಪಾಸ್‌ಪೋರ್ಟ್ (ಚಿಪ್ ಆಧಾರಿತ): ಭಾರತ ಸರ್ಕಾರವು ಭದ್ರತೆಯನ್ನು ಹೆಚ್ಚಿಸಲು ಬಯೋಮೆಟ್ರಿಕ್ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ಹಂತಹಂತವಾಗಿ ಜಾರಿಗೆ ತರುತ್ತಿದ್ದು, ನೂತನ ಶುಲ್ಕ ಮತ್ತು ನಿಯಮಾವಳಿಗಳು ಸುಧಾರಿತ ತಂತ್ರಜ್ಞಾನದ ಸೇವೆ ಒದಗಿಸಲು ನೆರವಾಗಲಿವೆ.
