15 ವರ್ಷಕ್ಕಿಂತ ಹಳೇ ಎಲ್ಲಾ ಸರ್ಕಾರಿ ವಾಹನ ಗುಜರಿಗೆ ಹಾಕಿ : ರಾಜ್ಯ ಸರ್ಕಾರ ಆದೇಶ – vishwanews24
15 ವರ್ಷಕ್ಕಿಂತ ಹಳೆಯ ಎಲ್ಲಾ ಸರ್ಕಾರಿ ವಾಹನ ಗುಜರಿಗೆ ಹಾಕಿ : ರಾಜ್ಯ ಸರ್ಕಾರ ಆದೇಶ
ಬೆಂಗಳೂರು: 15 ವರ್ಷಕ್ಕಿಂತ ಹಳೇ ಎಲ್ಲಾ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಇಲಾಖೆ, ನಿಗಮ, ನಗರಸಭೆ, ಮಂಡಳಿಗಳ ವಾಹನಗಳನ್ನು ನಾಶಪಡಿಸಲು ಆದೇಶದಲ್ಲಿ ತಿಳಿಸಲಾಗಿದೆ. ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ಈ ಸೂಚನೆ ನೀಡಿದೆ.
ಆದ್ಯತೆ ಮತ್ತು ಉಪಯೋಗದ ಆಧಾರದ ಮೇಲೆ 5 ಸಾವಿರ ವಾಹನಗಳನ್ನು ನಾಶಪಡಿಸಲು ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿರುವ ಸ್ಕ್ರಾಪಿಂಗ್ ಘಟಕಗಳಲ್ಲಿ ಸ್ಕ್ರಾಪ್ ಮಾಡಲು ಸರ್ಕಾರದ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಬಸ್ ಚಲಾಯಿಸುವಾಗ ಎದೆನೋವು ; ಪ್ರಯಾಣಿಕರ ರಕ್ಷಣೆಗಾಗಿ ಬಸ್ ನಿಲ್ಲಿಸಿ ಪ್ರಾಣಬಿಟ್ಟ KSRTC ಚಾಲಕ – vishwanews24
ಪರಿಸರ ಸಂರಕ್ಷಣೆ ದೃಷ್ಟಿಯಿಂದ ನೋಂದಣಿಯಾಗಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಾಶ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ತನ್ನ ಅಧೀನ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಹಳೆ ವಾಹನಗಳ ನಾಶಕ್ಕೆ ಮುಂದಾಗಿದೆ.
