17-06-2021 : ಇಂದಿನ ದಿನ ಭವಿಷ್ಯ -Vishwanews24
17-06-2021 : ಇಂದಿನ ದಿನ ಭವಿಷ್ಯ -Vishwanews24
ಮೇಷ : ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ಬರಬಹುದು. ದಿನಾಂತ್ಯ ಕಿರು ಸಂಚಾರವಿದೆ.
ವೃಷಭ ರಾಶಿ : ಅನಿರೀಕ್ಷಿತ ಪವಾಡ ಸಂಭವಿಸಬಹುದು ಎಂಬ ಅತಿ ಆತ್ಮವಿಶ್ವಾಸ ಬೇಡ. ಮಾಡಿದ ಪ್ರಯತ್ನಕ್ಕೆ ಫಲ ಇದ್ದೇ ಇದೆ.
ಮಿಥುನ ರಾಶಿ : ನಿಮ್ಮ ಮನೆತನದ ಪ್ರಭಾವಕ್ಕೆ ವಿಶಿಷ್ಟ ತೂಕವಿದೆ. ಆತ್ಮವಿಶ್ವಾಸ ಬೆಳೆಸಿಕೊಂಡರೆ ವ್ಯಕ್ತಿತ್ವದ ಉನ್ನತಿ ಸಾಧ್ಯವಾಗಲಿದೆ.
ಕಟಕ ರಾಶಿ : ಒಗಟಿನಂತೆ ಮಾತಾಡದಿರಿ. ಎಲ್ಲರೂ ನಿಮ್ಮಷ್ಟು ಬುದ್ಧಿವಂತರೇ ಇರುತ್ತಾರೆ ಎಂದುಕೊಳ್ಳಬೇಡಿ ಇದರಿಂದ ಕಷ್ಟವಾಗಲಿದೆ.
ಸಿಂಹ ರಾಶಿ : ಸಿಹಿ ಹಂಚಬೇಕಾದ ಅಪರೂಪದ ಸಾಧನೆ ಕೈಗೊಳ್ಳುದಕ್ಕೆ ಅಪಾರ ಅವಕಾಶಗಳು ಲಭ್ಯವಾಗಲಿವೆ. ನೆರೆಹೊರೆಯವರ ಜತೆಗೆ ಅನಗತ್ಯವಾಗಿ ಜಗಳವಾಡುವ ಬೆಳವಣಿಗೆಗಳು ಉಂಟಾಗಬಹುದು ಎಚ್ಚರವಿರಲಿ.
ಕನ್ಯಾ ರಾಶಿ : ಹಗಲುಗನಸುಗಳನ್ನು ಕಾಣುತ್ತ ಕುಳಿತರೆ ಏನೂ ಫಲವಿಲ್ಲ. ಕನಸು ನನಸಾದರಷ್ಟೆ ಕಾಂಚನದ ಸಿದ್ಧಿ ಸಾಧ್ಯವಿದೆ.
ತುಲಾ ರಾಶಿ : ವಾಹನ ಖರೀದಿಯ ಯೋಗ ಬರಬಹುದು. ಆದರೆ ಅವಸರ ಬೇಡ. ಖರೀದಿಸದಿದ್ದರೂ ತೊಂದರೆ ಏನಿಲ್ಲ. ಪ್ರಮುಖ ವಿಚಾರದಲ್ಲಿ ಖಂಡಿತವಾಗಿ ಅವಸರ ಬೇಡ.
ವೃಶ್ಚಿಕ ರಾಶಿ : ನಿಮ್ಮ ಗುರಿಯನ್ನು ಇನ್ನಷ್ಟು ದೃಢವಾಗಿ ತಲುಪುವ ಅವಕಾಶ ಸಿಗಲಿದೆ. ಆದರೆ ಎಲ್ಲರನ್ನೂ ನಂಬಲು ಹೋಗಬೇಡಿ.
ಧನಸ್ಸು ರಾಶಿ : ಹೊಸ ಉತ್ಸಾಹದ ಅಲೆಗಳು ನಿಮ್ಮೊಳಗೆ ಸೃಷ್ಟಿಯಾಗಲಿವೆ. ಇದರಿಂದ ವಿಶಿಷ್ಟವಾದ ಸಿದ್ಧಿ ಸಾಧ್ಯವಾಗಲಿದೆ. ಸೈನಿಕನಂತೆ ಮುನ್ನುಗ್ಗುವ ತೀರ್ಮಾನವನ್ನು ತಳೆಯಲಿದ್ದೀರಿ.
ಮಕರ ರಾಶಿ : ಷೇರುಗಳು, ಜೀವವಿಮಾ ಅಥವಾ ಇನ್ನಿತರ ಭೂಮಿ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಹಿಡಿದ ಕೆಲಸದಲ್ಲಿ ಸೋಲು ಎದುರಾಗುತ್ತದೆ ಎಂದು ಭಾವಿಸದಿರಿ. ನಿಮಗೆ ಹೊಸ ಅನುಭವದ ಲಾಭವಾಗಲಿದೆ.
ಕುಂಭ ರಾಶಿ : ಮನೆಯ ವಿಚಾರವಾಗಿ ನೀವು ನಿಜಕ್ಕೂ ಅದೃಷ್ಟಶಾಲಿಗಳಾಗಿದ್ದೀರಿ. ಕುಟುಂಬದ ಎಲ್ಲ ಸದಸ್ಯರ ಬೆಂಬಲ ಲಭ್ಯವಾಗಲಿದೆ.
ಮೀನ ರಾಶಿ : ಗೆಳೆಯರು ಹೊಸ ವಿಚಾರಗಳನ್ನು ತಿಳಿಸುವ ತವಕದಲ್ಲಿರುತ್ತಾರೆ. ಆದರೆ ನಿಮ್ಮೊಳಗೆ ತರ್ಕಬದ್ಧ ಚಿಂತನೆ ಇರಲಿ.
