18 ವರ್ಷಗಳ ಸಾರ್ಥಕ ಸೇವೆ ಬಳಿಕ ಸೇವೆಯಿಂದ ನಿವೃತ್ತಿಯಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ – Vishwanews24

Featured, ರಾಷ್ಟ್ರ ನ್ಯೂಸ್

18 ವರ್ಷಗಳ ಸಾರ್ಥಕ ಸೇವೆ ಬಳಿಕ ಸೇವೆಯಿಂದ ನಿವೃತ್ತಿಯಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

ನವದೆಹಲಿ: ಪಾಕ್ ಯುದ್ದ ವಿಮಾನ ಎಫ್ 16 ಹೊಡೆದುರುಳಿಸಿ ಪಾಕಿಸ್ತಾನ ಸೈನಿಕರ ವಶದಲ್ಲಿದ್ದಲ್ಲಿದ್ದರೂ ಎದೆಗಾರಿಕೆಯಿಂದ ಎದುರಿಸಿ ಬಳಿಕ ರಾಜತಾಂತ್ರಿಕ ಸಂಧಾನದ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಬಂದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.

ಅಭಿನಂದನ್ ವರ್ಧಮಾನ್ ಅವರು ವಾಯು ಸೇನೆಯಲ್ಲಿ ಮಿಗ್ 21 ಯುದ್ದ ವಿಮಾನದ ವಿಂಗ್ ಕಮಾಂಡರ್ ಆಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಅವರು ಪಾಕ್‌ ಯುದ್ದ ವಿಮಾನ ಎಫ್ 16ನ್ನು ಹೊಡೆದುರುಳಿಸಿ ಪಾಕ್ ಸೈನಿಕರಿಗೆ ಸೆರೆ ಸಿಕ್ಕಿ ಪಾಕ್ ವಶದಲ್ಲಿದ್ದರು. ಆದರೆ ಈ ವೇಳೆ ಎದೆಗುಂದದೆ ದಿನಗಳೆದಿದ್ದ ಅವರು, ಬಳಿ ರಾಜತಾಂತ್ರಿಕ ಸಂಧಾನದ ಮೂಲಕ ಪಾಕ್ ವಶದಿಂದ ಬಿಡುಗಡೆಗೊಂಡು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದರು.

ಮಂಗಳೂರು: ಬೇರೆಯವರ ಪಾಸ್‌ಪೋರ್ಟ್‌ ಬಳಸಿ ವಿದೇಶಕ್ಕೆ ತೆರಳಲು ಪ್ರಯತ್ನ : ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ – Vishwanews24

2004ರಲ್ಲಿ ವಾಯುಪಡೆಗೆ ಸೇರ್ಪಡೆಗೊಂಡಿದ್ದ ಅಭಿನಂದನ್ ವರ್ಧಮಾನ್ ಸೋರ್ಡ್ ಆರ್ಮ್ ವಾಯುಪಡೆಯ 51ನೇ ಸ್ಕ್ವಾಡ್ರನ್ ತಂಡದ ಸದಸ್ಯ ಕೂಡಾ ಆಗಿದ್ದರು. 18 ವರ್ಷಗಳ ಸಾರ್ಥಕ ಸೇವೆ ಬಳಿಕ ಸೇವೆಯಿಂದ ಅವರು ನಿವೃತ್ತಿಯಾಗಿದ್ದಾರೆ.

 

Leave a Reply