18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶನಿವಾರದಿಂದ ಲಸಿಕೆಗಾಗಿ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ -Vishwanews24
18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶನಿವಾರದಿಂದ ಲಸಿಕೆಗಾಗಿ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ -Vishwanews24
ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಶನಿವಾರದಿಂದ ಲಸಿಕೆಗಾಗಿ ನೋಂದಾಯಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಕೋವಿನ್ ಪ್ಲಾಟ್ಫಾರ್ಮ್ನಲ್ಲಿ ಮುಂದಿನ 48 ಗಂಟೆಗಳಲ್ಲಿ ಇತ್ತೀಚಿನ ಸುತ್ತಿನ ಇನಾಕ್ಯುಲೇಶನ್ಗಳ ನೋಂದಣಿ ಪ್ರಕ್ರಿಯೆಯನ್ನು ತೆರೆಯುತ್ತದೆ.
ಭಾರತವು ವಿಶ್ವದ ಅತ್ಯಂತ ಕೆಟ್ಟ ಕೋವಿಡ್ ಉಲ್ಬಣವನ್ನು ಎದುರಿಸುತ್ತಿರುವಾಗ, ದೈನಂದಿನ ಪ್ರಕರಣಗಳು ಇಂದು ಯುಎಸ್ ಅನ್ನು ಮೀರಿಸಿದೆ, ಈ ನಡುವೆ ಕರೋನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ವಯಸ್ಕರಿಗೆ (18 ವಯಸ್ಸಿನ ಮೇಲ್ಪಟ್ಟ) ಮೊದಲ ಬಾರಿಗೆ ಲಸಿಕೆಗಳನ್ನು ನೀಡಲು ಮುಂದಾಗಿದೆ.
ಇದು ಮೂರ್ಖ ಸರ್ಕಾರ, ಇನ್ನೂ ಕೂಡಾ ಇವರಿಗೆ ಬುದ್ದಿ ಬಂದಿಲ್ಲ : ಕುಮಾರಸ್ವಾಮಿ -Vishwanews24
ಹೊಸ ಲಸಿಕೆ ನಿಯಮಗಳ ಪ್ರಕಾರ, ರಾಜ್ಯಗಳು ಮತ್ತು ಖಾಸಗಿ ಸಂಸ್ಥೆಗಳು ಚುಚ್ಚುಮದ್ದಿಗೆ ನೇರವಾಗಿ ಲಸಿಕೆಗಳನ್ನು ಖರೀದಿಸಬಹುದು. ಮುಂಚೂಣಿಯಲ್ಲಿರುವ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈವರೆಗೆ ಅರ್ಹರು ಎಂದು ಘೋಷಿಸಿದವರಿಗೆ ಲಸಿಕೆ ನೀಡುವುದನ್ನು ಕೇಂದ್ರ ಮುಂದುವರಿಸಲಿದೆ.
ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಹೊಸ ಕರೋನ ಪ್ರಕರಣಗಳು, ಧೃಡಪಟ್ಟಿದ್ದು, ಇದೇ ವೇಳೆಯಲ್ಲಿ 2,104 ಮಂದಿ ಮೃತಪಟ್ಟಿದ್ದು, ಮತ್ತು ಕರೋನ ಸೊಂಕಿನಿಂದ 1,78,841 ಮಂದಿ ಗುಣಮುಖರಾಗಿದ್ದಾರೆ.
ಒಟ್ಟು ಪ್ರಕರಣಗಳ ಸಂಖ್ಯೆ: 1,59,30,965
ಒಟ್ಟು ಗುಣಮುಖರಾದವರ ಸಂಖ್ಯೆ : 1,34,54,880
ಒಟ್ಟು ಸಾವಿನ ಸಂಖ್ಯೆ: 1,84,657
ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ : 22,91,428
ಒಟ್ಟು ವ್ಯಾಕ್ಸಿನೇಷನ್ ತೆಗೆದುಕೊಂಡರವರ ಸಂಖ್ಯೆ : 13,23,30,644
