18 ವರ್ಷಗಳ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ – Vishwanews24

Featured, ರಾಷ್ಟ್ರ ನ್ಯೂಸ್

 18 ವರ್ಷಗಳ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ – Vishwanews24

ಚೆನ್ನೈ: ತಮಿಳುನಾಡು ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ಹಾಗೂ ನಟ ಧನುಷ್ ತಮ್ಮ ವಿಚ್ಛೇದನ ಘೋಷಿಸಿದ್ದಾರೆ. ಇದರೊಂದಿಗೆ ಅವರಿಬ್ಬರ 18 ವರ್ಷಗಳ ದಾಂಪತ್ಯ ಕೊನೆಗೊಂಡಂತಾಗಿದೆ.

ಧನುಷ್ ಮತ್ತು ಐಶ್ವರ್ಯಾ ಅವರು 2004ರಲ್ಲಿ ವಿವಾಹವಾಗಿದ್ದರು. ಐಶ್ವರ್ಯಾ ಅವರು ರಜನಿಕಾಂತ್ ಅವರ ಹಿರಿಯ ಪುತ್ರಿಯಾಗಿದ್ದಾರೆ. ವಿವಾಹವಾದಾಗ ಧನುಷ್ ಅವರಿಗೆ 21 ವರ್ಷವಾಗಿದ್ದರೆ ಐಶ್ವರ್ಯಾ ಅವರಿಗೆ 23 ವರ್ಷ ವಯಸ್ಸು. ಪರಸ್ಪರ ಪ್ರಿತಿಸಿ ಮದುವೆಯಾಗಿದ್ದ ಜೋಡಿ. ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದರು.

ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೈಪುಂಜಾಲು ಮೀನುಗಾರರ ಪ್ರಾ.ವಿವಿದೋದ್ದೇಶ ಸಹಕಾರ ಸಂಘ-ಇಂದು ಶತಮಾನೋತ್ಸವ ಸಮರೋಪ ಸಮಾರಂಭ-ಗಣ್ಯಾಥಿ-ಗಣ್ಯರ ಉಪಸ್ಥಿತಿ: vishwanews24

ಆದರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ಇದೀಗ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ಕೊನೆಗೊಳಿಸಿರುವ ಖ್ಯಾತ ತಮಿಳು ಸಿನಿಮಾ ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ ವಿಚ್ಚೇದನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

 

ಧನುಷ್ ತಮ್ಮ ಡಿವೋರ್ಸ್ ಕುರಿತಾಗಿ ಉದ್ದದ ಪೋಸ್ಟ್ ಹಾಕಿಕೊಂಡಿದ್ದರೆ, ಐಶ್ವರ್ಯಾ ಅವರು ಅದನ್ನೇ ರೀಪೋಸ್ಟ್ ಮಾಡಿ ‘ಹೆಚ್ಚೇನೂ ಹೇಳುವುದಿಲ್ಲ ಅಂಡರ್ ಸ್ಟ್ಯಾಂಡಿಂಗ್ ಮತ್ತು ಪ್ರೀತಿ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಮಂಗಳೂರು : ದಕ ಜಿಲ್ಲಾ ಯುವ ಜೆಡಿಎಸ್‌ ವತಿಯಿಂದ ನಾರಾಯಣಗುರುಗಳ ಸ್ಥಬ್ಧಚಿತ್ರಕ್ಕೆ ಅವಕಾಶ ಕೋರಿ ಪ್ರಧಾನಿಗೆ ಮನವಿ – Vishwanews24

 

Leave a Reply