2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದ್ದು ; ರಾಹುಲ್ ಗಾಂಧಿ ಮೇಲಿನ ವಿಶ್ವಾಸಾರ್ಹತೆ ಹೆಚ್ಚಾಗುತ್ತಿದೆ ,  ಹಾಗಾಗಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅತ್ಯುತ್ತಮ ಆಯ್ಕೆ : ವೀರಪ್ಪ ಮೊಯ್ಲಿ

Featured, ರಾಷ್ಟ್ರ ನ್ಯೂಸ್

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದ್ದು ; ರಾಹುಲ್ ಗಾಂಧಿ ಮೇಲಿನ ವಿಶ್ವಾಸಾರ್ಹತೆ ಹೆಚ್ಚಾಗುತ್ತಿದೆ ,  ಹಾಗಾಗಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅತ್ಯುತ್ತಮ ಆಯ್ಕೆ : ವೀರಪ್ಪ ಮೊಯ್ಲಿ

ಹೈದರಾಬಾದ್: 2019ರ ಲೋಕಸಭೆ ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ.  ಈ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೆ ರಾಹುಲ್  ಗಾಂಧಿಯೇ ಪ್ರಧಾನಿಯಾಗಲು ಅತ್ಯುತ್ತಮ ಆಯ್ಕೆ ಎಂದು ಬುಧವಾರ ತೆಲಂಗಾಣದಲ್ಲಿ ಹೇಳಿದ್ದಾರೆ.

ತೆಲಂಗಾಣದಲ್ಲಿ ಪಕ್ಷದ ಪರ ಪ್ರಚಾರ ನಡೆಸಿದ ವೀರಪ್ಪ ಮೊಯ್ಲಿ, ನಮ್ಮ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಏರುಗತಿಯಲ್ಲಿದ್ರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ತನ್ನ ಮಿತ್ರಪಕ್ಷಗಳನ್ನು ಕಳೆದುಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ಬಿಜೆಪಿ ವಿರೋಧಿ ಮೈತ್ರಿಕೂಟದ ಪಕ್ಷಗಳು ರಾಹುಲ್‌ನನ್ನು ನಾಯಕನನ್ನಾಗಿ ಬಿಂಬಿಸುತ್ತವಾ ಎಂಬ ಪ್ರಶ್ನೆಗೆ  ವೀರಪ್ಪ ಮೊಯ್ಲಿ ,ರಾಹುಲ್‌ ಗಾಂಧಿಯೇ ಪ್ರಧಾನಿಯಾಗಲು ಉತ್ತಮ ಆಯ್ಕೆ ಎಂದು ವೀರಪ್ಪ ಮೊಯ್ಲಿ ಪಿಟಿಐಗೆ ತಿಳಿಸಿದ್ದಾರೆ.

”ಕಾಂಗ್ರೆಸ್ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ಸೇರಿ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ” ಎಂದೂ ಮೊಯ್ಲಿ ವಿಶ್ವಾಸದಿಂದ ಹೇಳಿದ್ದಾರೆ. ಜತೆಗೆ, ”ವಿಪಕ್ಷಗಳು ಒಗ್ಗೂಡುವುದು ವಾಸ್ತವವಾಗುತ್ತಿದ್ದು, ಕಾಂಗ್ರೆಸ್ ಎಲ್ಲ ರಾಜ್ಯಗಳಲ್ಲೂ ಮೇಲೇಳುತ್ತಿದೆ. ಹೀಗಾಗಿ, ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದ್ದು, ಇದರಿಂದ ನಮ್ಮ ರಾಹುಲ್ ಗಾಂಧಿ ಮೇಲಿನ ವಿಶ್ವಾಸಾರ್ಹತೆ ಹೆಚ್ಚಾಗುತ್ತಿದೆ” ಎಂದೂ ಅವರು ತಿಳಿಸಿದ್ದಾರೆ.

ನರೇಂದ್ರ ಮೋದಿ ಹಾಗೂ ಎನ್‌ಡಿಎ ವಿರುದ್ಧ ಹೋರಾಡುವ ವಿಚಾರದಲ್ಲಿ ಎಲ್ಲ ಪಕ್ಷಗಳೂ ಒಂದಾಗಿವೆ. ಅದು ಅತಿಮುಖ್ಯ” ಎಂದೂ ತೆಲಂಗಾಣದಲ್ಲಿ ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.