Featured

2021 ಗಣೇಶ ಚತುರ್ಥಿ: ಗಣೇಶನ ಈ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯು ಹೆಚ್ಚಾಗುತ್ತದೆ -Vishwanews24

2021 ಗಣೇಶ ಚತುರ್ಥಿ: ಗಣೇಶನ ಈ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯು ಹೆಚ್ಚಾಗುತ್ತದೆ -Vishwanews24

ಗಣೇಶ ಚತುರ್ಥಿಯಂದು ಮನೆಮನೆಗಳಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಈ ಪೂಜೆಯ ವೇಳೆ ಗಣೇಶನನ್ನು ಬಹುಬೇಗ ಸಂತೋಷಗೊಳಿಸಲು ಕೆಲವೊಂದು ಮಂತ್ರಗಳನ್ನು ಪಠಿಸಬೇಕು. ಆ ಮಂತ್ರಗಳು ಯಾವುವು..? ಗಣೇಶ ಮಂತ್ರದ ಪ್ರಯೋಜನವೇನು..?

ಗಣೇಶ ಚತುರ್ಥಿಯಂದು ರಿದ್ಧಿ, ಸಿದ್ಧಿ ಮತ್ತು ಸಂಪತ್ತಿಗಾಗಿ ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗಣೇಶ ಚತುರ್ಥಿ ಪೂಜೆಯಲ್ಲಿ ಗಣೇಶನ ಆಶೀರ್ವಾದ ಪಡೆಯಲು ಯಾವ ಮಂತ್ರಗಳನ್ನು ಪಠಿಸಬೇಕು ಗೊತ್ತಾ..? ಗಣೇಶನ ಈ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯು ಹೆಚ್ಚಾಗುತ್ತದೆ. ಅಷ್ಟು ಮಾತ್ರವಲ್ಲ, ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕೂಡ ನೀವು ಗಣೇಶನನ್ನು ಈ ಮಂತ್ರಗಳಿಂದ ಪೂಜಿಸಬಹುದು. ಮಂತ್ರಗಳಾವುವು ಗೊತ್ತಾ..?

1) ಶುಭ ಕಾರ್ಯಗಳ ಆರಂಭಕ್ಕೂ ಮುನ್ನ ಗಣೇಶ ಮಂತ್ರ:

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ

ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ ||

2) ಗಣೇಶನಿಗೆ ನಮಸ್ಕರಿಸುವ ಮಂತ್ರ:

ಪ್ರಣಾಮ್ಯ ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ |

ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||

ಗೌರಿ ಪುತ್ರನಾದ ಭಗವಾನ್‌ ಶ್ರೀ ಗಣೇಶನಿಗೆ ನಮಸ್ಕರಿಸುತ್ತಾ, ನಮಗೆ ಆಯಸ್ಸು, ಆರೋಗ್ಯ ಮತ್ತು ಇಷ್ಟಾರ್ಥಗಳನ್ನು ಈಡೇರಿಸಿರುವುದಕ್ಕಾಗಿ ಈ ಮೂಲಕ ನಿಮಗೆ ನಮಸ್ಕಾರವನ್ನು ಸಲ್ಲಿಸುತ್ತಿದ್ದೇವೆ ಎಂಬರ್ಥವನ್ನು ಈ ಮಂತ್ರ ನೀಡುತ್ತದೆ.

3) ವಿವಿಧ ನಾಮಗಳಿಂದ ಗಣೇಶನನ್ನು ಹೊಗಳುವ ಮಂತ್ರ:

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ |

ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ರಂ ಚತುರ್ಥಕಂ ||

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇಮ ಚ |

ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಂ ||

ನವಮಂ ಬಾಲಚಂದ್ರಂ ಚ ದಶಮಂ ತು ಗಜಾನನಂ |

ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ ||

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ ನರಃ

ನಚವಿಘ್ನ ಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ ||

2020 ಭಾದ್ರಪದ ಮಾಸ: ಈ ಮಾಸದಲ್ಲಿ ಮೊಸರು ಸೇವಿಸಿದ್ರೆ ಆರೋಗ್ಯ ಹಾಳಾಗೋದು ಖಚಿತ..!

ವಿದ್ಯಾರ್ಥಿ ಲಭತೆ ವಿದ್ಯಾಂ ಧನಾರ್ತಿ ಲಭತೇ ಧನಂ

ಪುತ್ರಾರ್ತಿ ಲಭತೆ ಪುತ್ರಾನ್ ಮೊಕ್ಷಾರ್ತಿ ಲಭತೇ ಗತಿಂ ||

ಜಪೆತ್ ಗಣಪತಿ ಸ್ತೋತ್ರಂ ಷದ್ಭೀರ್ ಮಾಸೈ ಫಲಂ ಲಭೇತ್ ||

ಸಂವತ್ಸರೆನ ಸಿದ್ಧಿಂ ಚ ಲಭತೆ ನಾತ್ರ ಸಂಶಯಃ ||

ಅಷ್ಟಭ್ಯೋ ಬ್ರಹ್ಮನ್ಭ್ಯಸ್ ಚ ಲಿಖಿತ್ವ ಯಃ ಸಮರ್ಪಯೇತ್ ||

ತಸ್ಯ ವಿದ್ಯಾ ಭವೇತ್ ಸರ್ವಾ ಗಣೇಶಸ್ಯ ಪ್ರಾಸದತ ||

ಗಣೇಶನ 12 ಹೆಸರುಗಳನ್ನು ಹೊಂದಿರುವ ಈ ಮೇಲಿನ ಮಂತ್ರವನ್ನು ಯಾವ ವ್ಯಕ್ತಿ ಮೂರು ಸಂಜೆ ಪ್ರಾರ್ಥಿಸುತ್ತಾನೋ ಆ ವ್ಯಕ್ತಿಯ ಮನಸ್ಸಿನಲ್ಲಿ ಭಯವೆನ್ನುವುದು ಇರುವುದಿಲ್ಲ. ಆತ ಯಾವುದೇ ತೊಂದರೆಗಳಿಗೂ ಹೆದರುವುದಿಲ್ಲ. ಆತನಲ್ಲಿನ ಆತ್ಮಸ್ಥೈರ್ಯವು ಹೆಚ್ಚಾಗುವುದು. ಆ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಹಾದಿಯನ್ನೇ ಅನುಸರಿಸುವನು.

Vishwa News 24

Recent Posts

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ – vishwanews24

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ ಉಡುಪಿ: ಜಿಲ್ಲೆಯ ಮಲ್ಪೆ ಮೀನುಗಾರಿಕಾ ದಕ್ಕೆಯಲ್ಲಿ ಮಹಿಳೆಯ…

6 hours ago

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ – vishwanews24

ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ ನವದೆಹಲಿ :ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು…

6 hours ago

ಉಡುಪಿ : ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ : ಕೃಷ್ಣರಾಜ ತಂತ್ರಿ – vishwanews24

ಏರ್ ಕಂಡಿಷನರ್ ಸ್ಪೋಟಗೊಳ್ಳುತ್ತದೆ ಎಂಬುದು ತಪ್ಪು ಕಲ್ಪನೆ.. ಏಸಿಯಲ್ಲಿ ಇರುವ ಗ್ಯಾಸ್‌ಗೆ ಯಾವುದೇ ರೀತಿಯಲ್ಲೂ ಬೆಂಕಿ ಹಿಡಿಯಲ್ಲ.. ಕರಾವಳಿಗೆ ಕೂಲರ್‌ಗಿಂದ…

8 hours ago

ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ – vishwanews24

ಕೌಟುಂಬಿಕ ಕಲಹ : ಕೊಲೆಯಲ್ಲಿ  ಅಂತ್ಯ - ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಪತಿ ಮೈಸೂರು: ಸಣ್ಣ…

9 hours ago

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ – vishwanews24

ಲಡಾಖ್‌ನಲ್ಲಿ 4.1 ತೀವ್ರತೆಯ ಭೂಕಂಪ ಲೇಹ್: ಗುರುವಾರ ಮುಂಜಾನೆ ಲಡಾಖ್‌ನಲ್ಲಿ4.1 ತೀವ್ರತೆಯ ಭೂಕಂಪ  ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ…

10 hours ago

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ – vishwanews24

ಬೆಂಗಳೂರಲ್ಲಿ ವರುಣನ ಆರ್ಭಟ : ಮೇ 1ರವರೆಗೂ ಮಳೆ ಮುನ್ಸೂಚನೆ ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಸುರಿದ ಆಲಿಕಲ್ಲು ಮಳೆಗೆ 10…

10 hours ago