2022ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – Vishwanews24

Featured, ರಾಜ್ಯ ನ್ಯೂಸ್

2022ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ – Vishwanews24

ಪ್ರಥಮ ಪಿಯುಸಿ ಪರೀಕ್ಷೆ ಮಾ. 28ರಿಂದ ಎ. 13ರ ವರೆಗೆ..

ದ್ವಿತೀಯ ಪಿಯುಸಿ ಪರೀಕ್ಷೆಎ. 16 ರಿಂದ ಮೇ 4ರ ವರೆಗೆ..

ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯು 2021 – 22ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ, ಪ್ರಾಯೋಗಿಕ, ಪೂರ್ವ ಸಿದ್ಧತೆ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಎ. 16 ರಿಂದ ಮೇ 4ರ ವರೆಗೆ ನಡೆಯಲಿದೆ. ದ್ವಿತೀಯ ಪಿಯು ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ಮಾ. 14ರಿಂದ 25ರ ವರೆಗೆ; ದ್ವಿತೀಯ ಪಿಯುಸಿ ಪ್ರಾಯೋ ಗಿಕ ಪರೀಕ್ಷೆಗಳನ್ನು ಫೆ. 17ರಿಂದ ಮಾ. 25ರ ವರೆಗೆ ನಡೆಸಲಾಗುತ್ತದೆ.

ಮಾ. 28ರಿಂದ ಎ. 13ರ ವರೆಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವಂತೆ ಇಲಾಖೆ ಆದೇಶಿಸಿದೆ. 2021-22ನೇ ಸಾಲಿನಲ್ಲಿ ಭಾಷಾ ವಿಷಯದಲ್ಲಿ ಕಡಿತಗೊಳಿಸಿರುವ ಶೇ. 30ರಷ್ಟು ಪಠ್ಯಕ್ರಮ ಹೊರತುಪಡಿಸಿ ಉಳಿದ ಶೇ. 70ರಷ್ಟು ಪಠ್ಯಕ್ರಮಕ್ಕೆ ಮಾತ್ರಪರೀಕ್ಷೆನಡೆಸಲಾಗುತ್ತದೆ. ಆದರೆ ಐಚ್ಚಿಕ ವಿಷಯಗಳ ಪಠ್ಯಕ್ರಮದಲ್ಲಿ ಶೇ. 100ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆ ನಡೆಸ ಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

Leave a Reply