2023ರ ಮಧ್ಯದ ವೇಳೆಗೆ ಮೋದಿ ಕೂಡ ರಾಜೀನಾಮೆ ನೀಡಬೇಕಾಗಬಹುದು : ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ – Vishwanews24

Featured, ರಾಷ್ಟ್ರ ನ್ಯೂಸ್

ಅಜಿತ್ ದೋವಲ್ ಅವರನ್ನು ವಜಾಗೊಳಿಸದಿದ್ದರೆ ಪ್ರಧಾನಿ ಅವರು ರಾಜೀನಾಮೆ ನೀಡಬೇಕಾಗಬಹುದು  : ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ವಜಾಗೊಳಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕಾಗಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ ಮಂಗಳವಾರ ಹೇಳಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಜಿತ್‌ ದೋವಲ್‌ ವಿರುದ್ಧ ಗಂಭೀರ ಆರೋಪ ಮಾಡಿರುವ ಸ್ವಾಮಿ, ‘ಅಜಿತ್ ದೋವಲ್ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಹಗರಣ ಸೇರಿದಂತೆ ಹಲವು ಬಾರಿ ಎಡವಟ್ಟು ಮಾಡಿದ್ದಾರೆ’ ಎಂದು ಹೇಳಿದ್ದಾರೆ.

‘ಅಜಿತ್‌ ದೋವಲ್‌ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಒಳಗೊಂಡಂತೆ ಹಲವಾರು ಬಾರಿ ಎಡವಟ್ಟು ಮಾಡಿದ್ದಾರೆ. ಮೋದಿ ಅವರು ಎನ್‌ಎಸ್‌ಎ ಹುದ್ದೆಯಿಂದ ದೋವಲ್ ಅವರನ್ನು ವಜಾಗೊಳಿಸಬೇಕು. ಇಲ್ಲದಿದ್ದರೆ 2023ರ ಮಧ್ಯದ ವೇಳೆಗೆ ಮೋದಿ ಕೂಡ ರಾಜೀನಾಮೆ ನೀಡಬೇಕಾಗಬಹುದು’ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅಜಿತ್‌ ದೋವಲ್‌ ಮಾಡಿರುವ ಗಂಭೀರ ಯಡವಟ್ಟು ಶೀಘ್ರದಲ್ಲೇ ವಾಶಿಂಗ್ಟನ್‌ ಡಿಸಿಯಿಂದ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ಸರ್ಕಾರಿ ನೌಕರರಲ್ಲ : ಸಚಿವ ಕೋಟ – Vishwanews24

ಸ್ವಾಮಿ ಕಳೆದ ಕೆಲವು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಲೋಪಗಳ ವಿರುದ್ಧ ಧ್ವನಿಯೆತ್ತುತ್ತಲೇ ಬಂದಿದ್ದಾರೆ.

Leave a Reply