2024ರ ಅಂತ್ಯದ ವೇಳೆಗೆ ಭಾರತದ ರಸ್ತೆ ಗುಣಮಟ್ಟವು ಅಮೆರಿಕದ ರಸ್ತೆಗೆ ಸಮನಾಗಿರುತ್ತದೆ : ನಿತಿನ್ ಗಡ್ಕರಿ – Vishwanews24
2024ರ ಅಂತ್ಯದ ವೇಳೆಗೆ ಭಾರತದ ರಸ್ತೆ ಗುಣಮಟ್ಟವು ಅಮೆರಿಕದ ರಸ್ತೆಗೆ ಸಮನಾಗಿರುತ್ತದೆ : ನಿತಿನ್ ಗಡ್ಕರಿ
ನವದೆಹಲಿ: 2024 ರ ಅಂತ್ಯದ ವೇಳೆಗೆ, ಭಾರತದ ರಸ್ತೆಗಳು ಅಮೇರಿಕಾ ರಸ್ತೆ ಗುಣಮಟ್ಟಕ್ಕೆ ಸಮನಾಗಿರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
95ನೇ ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ (ಎಫ್ಐಸಿಸಿಐ ) ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ನಾವು ದೇಶದಲ್ಲಿ ವರ್ಲ್ಡ್ ಸ್ಟ್ಯಾಂಡರ್ಡ್ ರೋಡ್ ಗುಣಮಟ್ಟದ ರಸ್ತೆ ಸೌಕರ್ಯವನ್ನು ಮಾಡುತ್ತಿದ್ದೇವೆ. 2024 ರ ಅಂತ್ಯದ ಮೊದಲು ನಮ್ಮ ರಸ್ತೆ ಮೂಲಸೌಕರ್ಯವು ಅಮೆರಿಕದ ರಸ್ತೆ ಗುಣಮಟ್ಟದ ಮಾನದಂಡಗಳಿಗೆ ಸಮನಾಗಿರುತ್ತದೆ ಎಂದು ನಾನು ಭರವಸೆ ನೀಡುತ್ತೇವೆ. “ಎಂದು ಗಡ್ಕರಿ ಹೇಳಿದ್ದಾರೆ.
ಮಣಿಪಾಲ: ಡಿವೈಡರ್ ಗೆ ಬೈಕ್ ಡಿಕ್ಕಿ – ಎಂಐಟಿ ವಿದ್ಯಾರ್ಥಿ ಮೃತ್ಯು , ಇಬ್ಬರು ಗಂಭೀರ ಗಾಯ – Vishwanews24
‘ನಮ್ಮ ಸರಕು ವೆಚ್ಚ ದೊಡ್ಡ ಸಮಸ್ಯೆಯಾಗಿದೆ. ಸದ್ಯ ಸರಕು ವೆಚ್ಚೇ ಶೇ 16ರಷ್ಟಿದೆ. 2024ರ ಅಂತ್ಯಕ್ಕೆ ಇದನ್ನು ಶೇ 9 ಅಂಕಿಗೆ ಇಳಿಯುವಂತೆ ಮಾಡುತ್ತೇವೆ ಎಂದು ಭರವಸೆ ನೀಡುತ್ತೇನೆ‘ ಎಂದು ಅವರು ಹೇಳಿದ್ದಾರೆ.
ಜಗತ್ತಿನ ಶೇ 40 ರಷ್ಟು ಸಂಪನ್ಮೂಲ, ನಿರ್ಮಾಣ ವಲಯಕ್ಕೆ ಖರ್ಚಾಗುತ್ತದೆ. ಸಂಪನ್ಮೂಲಗಳ ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿರ್ಮಾಣದ ಗುಣಮಟ್ಟವನ್ನು ಸುಧಾರಿಸಲು ನಾವು ಗಮನ ಹರಿಸುತ್ತೇವೆ. ನಿರ್ಮಾಣಕ್ಕೆ ಸಿಮೆಂಟ್ ಮತ್ತು ಉಕ್ಕು ಪ್ರಮುಖ ಅಂಶಗಳಾಗಿವೆ. ನಿರ್ಮಾಣದಲ್ಲಿ ನಾವು ಉಕ್ಕಿಗೆ ಬದಲಾಗಿ ಪರ್ಯಾಯ ವಸ್ತು ಬಳಸಲು ಗರಿಷ್ಠ ಪ್ರಯತ್ನ ಪಡುತ್ತಿದ್ದೇವೆ ಎಂದಿದ್ದಾರೆ.
ಉಜಿರೆ: ಅಷ್ಟಮಂಗಲ ಪ್ರಶ್ನೆಯಲ್ಲಿಇದ್ದಂತೆ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆ – Vishwanews24
