2025ನೇ ಸಾಲಿನ ಶ್ರೀ ಶಿವಕುಮಾರ ಪ್ರಶಸ್ತಿಗೆ ಹಿರಿಯ ಕಲಾವಿದೆ ಉಮಾಶ್ರೀ ಆಯ್ಕೆ – vishwanews24
2025ನೇ ಸಾಲಿನ `ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಹಿರಿಯ ಕಲಾವಿದೆ ಉಮಾಶ್ರೀ ಆಯ್ಕೆ
2004 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ `ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಿಗೆ ಲಿಂಗಭೇದವಿಲ್ಲದೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.
ಕರಾವಳಿಯಲ್ಲಿ ಅ. 25 ರವರೆಗೆ ಗುಡುಗು ಸಿಡಿಲು ಸಹಿತ ಬಾರೀ ಮಳೆ ಸಾಧ್ಯತೆ : ಹವಮಾನ ಇಲಾಖೆ ಮುನ್ಸೂಚನೆ – vishwanews24
ಇದುವರೆಗೂ ಪ್ರಸನ್ನ(2004), ಸಿಜಿಕೆ(2005), ಪಿ ಜಿ ಗಂಗಾಧರಸ್ವಾಮಿ(2006), ಅಶೋಕ ಬಾದರದಿನ್ನಿ(2007), ಮಾಲತಿಶ್ರೀ(2008), 2009ರಲ್ಲಿ ಅತಿವೃಷ್ಠಿ ಕಾರಣ ನೀಡಿಲ್ಲ. ಸಿ ಬಸವಲಿಂಗಯ್ಯ(2010), ಬಿ ಜಯಶ್ರೀ(2011), ಡಾ. ಕೆ ಮರುಳಸಿದ್ಧಪ್ಪ(2012), ಚಿದಂಬರರಾವ್ ಜಂಬೆ(2013), ಕೋಟಗಾನಹಳ್ಳಿ ರಾಮಯ್ಯ(2014), ಡಾ. ಸುಭದ್ರಮ್ಮ ಮನ್ಸೂರು (2015), ಲಕ್ಷ್ಮೀ ಚಂದ್ರಶೇಖರ್ (2016), ಶ್ರೀನಿವಾಸ ಜಿ ಕಪ್ಪಣ್ಣ (2017), ಬಸವರಾಜ ಬೆಂಗೇರಿ(2018), ಟಿ ಎಸ್ ನಾಗಾಭರಣ (2019), 2020ರಲ್ಲಿ ಕರೋನಾ ಕಾರಣದಿಂದ ನೀಡಿಲ್ಲ. ಕೆ ವಿ ನಾಗರಾಜಮೂರ್ತಿ (2021), ಡಾ. ಎಂ ಜಿ ಈಶ್ವರಪ್ಪ(2022), ಶಶಿಧರ ಅಡಪ (2023), ಮಹಾಂತೇಶ್ ಗಜೇಂದ್ರ ಗಡ (2024) ಇವರಿಗೆ ನೀಡುತ್ತಾ ಬರಲಾಗಿದೆ.
ಈ ವರ್ಷ ಈ ಪ್ರಶಸ್ತಿಗೆ ಭಾಜನರಾದವರು ರಂಗಭೂಮಿ ಮತ್ತು ಚಲನಚಿತ್ರರಂಗದ ಶ್ರೇಷ್ಠ ಕಲಾವಿದೆ ಉಮಾಶ್ರೀ ಅವರು.
ಆಯ್ಕೆ ಸಮಿತಿಯ ಮುಂದೆ ಹತ್ತಾರು ಪ್ರತಿಭಾವಂತ ಮತ್ತು ಅರ್ಹ ರಂಗಕರ್ಮಿಗಳ ಹೆಸರುಗಳಿದ್ದವು. ಪ್ರಶಸ್ತಿ ಒಂದೇ ಆಗಿರುವುದರಿಂದ ಅಂತಿಮವಾಗಿ ರಂಗಕ್ಷೇತ್ರ, ಚಲನಚಿತ್ರ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಈಗಲೂ ತೊಡಗಿಕೊಂಡಿರುವ ಶ್ರೀಮತಿ ಉಮಾಶ್ರೀ ಅವರನ್ನು ಆಯ್ಕೆ ಮಾಡಿದೆ. ಇಂತಹ ಅಪರೂಪದ ರಂಗಕಲಾವಿದೆ `ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಭಾಜನರಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಉಮಾಶ್ರೀ ಅವರನ್ನು ಅಭಿನಂದಿಸಿ ಸುದ್ದಿಯನ್ನು ಮಾಧ್ಯಮಗಳಿಗೆ ಬಿಡುಗೊಳಿಸಿದರು.
ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಪ್ರಶಸ್ತಿಯನ್ನು ಇದೇ ನವೆಂಬರ್ 2 ರಿಂದ 7 ರವರೆಗೆ ಸಾಣೇಹಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದ ದಿನ ಪ್ರದಾನ ಮಾಡಲಾಗುವುದು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದರು.
ಮಣಿಪಾಲ : ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ; ಇಬ್ಬರ ಬಂಧನ – vishwanews24
