2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ
ಮೈಸೂರು: 2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನನಗೆ ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಈಗ ಡಿ.ಕೆ ಶಿವಕುಮಾರ್ ಅವರು ನಾನೇ ಮುಂದೇಯೂ ಸಿಎಂ ಅಂತಾ ಹೇಳ್ತಿದ್ದಾರೆ. ನನಗೆ ಸಂತೋಷ, 2028ಕ್ಕೂ ಅವ್ರೇ ಸಿಎಂ ಆಗಲಿ, ಮಅವರಿಂದಲೇ ಪಕ್ಷ ಅಧಿಕಾರಕ್ಕ ಬರಲಿ. ನನಗೆ ಇನ್ನೂ ವಯಸ್ಸಿದೆ, ಕಾಯುತ್ತೇನೆ ಎಂದು ತಿಳಿಸಿದ್ದಾರೆ.
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24
ಇಡಿಯದ್ದು ಸಂಪೂರ್ಣವಾಗಿ ರಾಜಕೀಯ ದಾಳಿ. ಕಳೆದ 14 ವರ್ಷಗಳಿಂದ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಮೇಲೆ ಒಂದೇ ಒಂದು ಇಡಿ ದಾಳಿಯೂ ಆಗಿಲ್ಲ. ನನ್ನ ಮೇಲೆ ಯಾರೇ ದೂರು ಕೊಟ್ಟಿರಲಿ ಅದು ಪ್ರಶ್ನೆ ಅಲ್ಲ. ಆದ್ರೆ ಇದು ರಾಜಕೀಯವಾಗಿ ಮಾಡಿರುವ ದಾಳಿ. ಯಾರು ದೂರು ಕೊಟ್ಟಿದ್ದಾರೆ ಏನು ಹಿನ್ನಲೆ ಎಂಬುದನ್ನ ಗಮನಿಸುತ್ತಿದ್ದೇನೆ. ಎಲ್ಲವೂ ನನಗೆ ಗೊತ್ತಾಗುತ್ತಿದೆ, ಇಡಿ ದಾಳಿಯಿಂದ ನಾನೇನು ಮಾನಸಿಕವಾಗಿ ಕುಂದಿಲ್ಲ. ಎಲ್ಲವನ್ನೂ ನಾನು ರಾಜಕೀಯವಾಗಿ ಎದುರಿಸುತ್ತೇನೆ ಎಂದಿದ್ದಾರೆ ಜಾರಕಿಹೊಳಿ.
