21 -02 – 2022 : ಇಂದಿನ ದಿನ ಭವಿಷ್ಯ-Vishwanews24
21 – 02 – 2022 : ಇಂದಿನ ದಿನ ಭವಿಷ್ಯ-Vishwanews24
ಮೇಷ : ಈ ದಿನವು ನಿಮಗೆ ಉತ್ತಮವಾಗಿ ಇರಲಿದೆ. ನೀವು ಅಂದುಕೊಂಡ ಕಾರ್ಯಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದೀರಿ.
ವೃಷಭ : ಯಾವುದೇ ಕೆಲಸವನ್ನು ಆರಂಭಿಸುವ ಮುನ್ನವೇ ನಕಾರಾತ್ಮಕವಾಗಿ ಚಿಂತಿಸುವುದನ್ನು ಬಿಟ್ಟುಬಿಡಿ.
ಮಿಥುನ : ಇನ್ನೊಬ್ಬರ ಜೊತೆ ಸೇರಿ ಮಾಡುವ ಎಲ್ಲಾ ಕೆಲಸಗಳಲ್ಲೂ ನೀವಿಂದು ಯಶಸ್ಸು ಕಾಣುವಿರಿ.
ಕಟಕ : ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ಸೇರಿ ಪ್ರವಾಸಿ ತಾಣಗಳಿಗೆ ತೆರಳಲಿದ್ದೀರಿ. ಕುಟುಂಬದಲ್ಲಿ ಶುಭ ಸುದ್ದಿಯನ್ನು ಕೇಳುವಿರಿ.
ಸಿಂಹ : ಎದುರಾಳಿಗಳನ್ನು ಸೋಲಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ಹೊಸ ಸ್ನೇಹಿತರು ನಿಮಗೆ ಸಿಗಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ.
ಕನ್ಯಾ : ನಿಮ್ಮ ನಡವಳಿಕೆಗಳಿಂದ ಸಾರ್ವಜನಿಕ ಜೀವನದಲ್ಲಿ ಗೌರವವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಸಂಯಮದಿಂದ ಸಾಥ್ ನೀಡಲಿದ್ದಾರೆ.
ತುಲಾ : ತಂದೆಯ ಮಾತುಗಳು ನಿಮ್ಮ ಮನಸ್ಸಿಗೆ ಚುಚ್ಚಲಿದೆ. ಆದರೂ ಕೋಪದ ಕೈಗೆ ಬುದ್ಧಿ ನೀಡಬೇಡಿ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ.
ವೃಶ್ಚಿಕ : ಬೇರೆಯವರ ಸಹಾಯ ಪಡೆದು ಅಂದುಕೊಂಡಿದ್ದನ್ನು ಸಾಧಿಸಲಿದ್ದೀರಿ. ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಸ್ನೇಹಿತ ಹೆಗಲಾಗಲಿದ್ದಾನೆ.
ಧನು : ನಿಮ್ಮ ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗುವಂತಹ ಘಟನೆಯೊಂದು ನಡೆಯಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಅನಗತ್ಯ ವಿವಾದ ಉಂಟಾಗಬಹುದು.
ಮಕರ : ಹೊಸ ಉದ್ಯಮ ಆರಂಭಿಸಿರುವ ನೀವು ಇದರಲ್ಲಿ ಲಾಭ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ಕುಂಭ : ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನೀವು ಚಿಂತೆಗೀಡಾಗಲಿದ್ದೀರಿ. ಈ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿ ನಿಮ್ಮ ಉಪಯೋಗಕ್ಕೆ ಬರಲಿದೆ.
ಮೀನ : ಕುಟುಂಬಸ್ಥರೊಂದಿಗೆ ಇಂದು ಉತ್ತಮವಾಗಿ ಸಮಯ ಕಳೆಯಲಿದ್ದೀರಿ. ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಇದು ಉತ್ತಮ ದಿನವಾಗಿದೆ.
